ಕೊರೊನಾ ವಿರುದ್ಧ ಇಡೀ ವಿಶ್ವವೇ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಆಸ್ಟ್ರಿಯಾ ರಾಷ್ಟ್ರ ಜುಲೈ 22ರಿಂದ ಕೋವಿಡ್ 19 ಮಾರ್ಗಸೂಚಿಗಳನ್ನ ಸಡಿಲಗೊಳಿಸಲು ಮುಂದಾಗಿದೆ. ಆದರೆ ಆಸ್ಟ್ರಿಯಾ ರಾಜಧಾನಿ ವಿಯೆನ್ನಾ ಮಾತ್ರ ಈ ನಿರ್ಬಂಧ ಸಡಿಲಿಕೆ ಕ್ರಮದಿಂದ ಹಿಂದೆ ಸರಿದಿದೆ.
ವಿಯೆನ್ನಾದ ಮೇಯರ್ ಮೈಕಲ್ ಲುಡ್ವಿಂಗ್ ಈ ವಿಚಾರವಾಗಿ ಮಾತನಾಡಿದ್ದು ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಹೇಳಿದ್ದಾರೆ.
ಹೊಸದಾಗಿ ವರದಿಯಾಗುತ್ತಿರುವ ಕೊರೊನಾ ಪ್ರಕರಣಗಳನ್ನ ಕಡಿಮೆ ಮಾಡಲು ನಾವು ಪ್ರಯತ್ನ ಪಡುತ್ತಿದ್ದೇವೆ. ಕೊರೊನಾ ಸಂಖ್ಯೆ ಹೆಚ್ಚಳವಾದಲ್ಲಿ ಅದು ವಿಯೆನ್ನಾದ ಆರ್ಥಿಕತೆ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ ಎಂದು ಲುಡ್ವಿಂಗ್ ಹೇಳಿದ್ದಾರೆ. ಹೀಗಾಗಿ ಎಫ್ಎಫ್ಪಿ 2 ಮಾಸ್ಕ್ಗಳನ್ನ ಎಲ್ಲಾ ಮಳಿಗೆಗಳಲ್ಲಿ ಹಾಗೂ ಆಂತರಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಕೆ ಮಾಡೋದು ಕಡ್ಡಾಯವಾಗಿರಲಿದೆ.
ಅಲ್ಲದೇ ಕೊರೊನಾ ವಿರುದ್ಧ ಲಸಿಕೆಯು ಪ್ರಮುಖ ಪಾತ್ರ ವಹಿಸೋದ್ರಿಂದ ಲಸಿಕಾ ಅಭಿಯಾನವನ್ನ ಇನ್ನಷ್ಟು ಚುರುಕುಗೊಳಿಸಲು ವಿಯೆನ್ನಾಂ ಪ್ರಯತ್ನಿಸುತ್ತಿದೆ ಎಂದು ಲುಡ್ವಿಂಗ್ ಹೇಳಿದ್ದಾರೆ.