ಶಾರ್ಕಿಯಾ: ಈಜಿಪ್ಟ್ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಸಾವನ್ನಪ್ಪುತ್ತಿರುವ ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಜನರನ್ನು ಆತಂಕಕ್ಕೀಡುಮಾಡಿದೆ. ಆದರೆ, ಆರೋಗ್ಯ ಸಚಿವರ ಕಚೇರಿ ಇದನ್ನು ನಿರಾಕರಿಸಿದೆ.
ದೇಶದ ರಾಜಧಾನಿ ಕೈರೋದಿಂದ 151 ಕಿಮೀ ದೂರದಲ್ಲಿರುವ ಅಲ್ ಹಸೀನಿಯಾ ಕೇಂದ್ರೀಯ ಆಸ್ಪತ್ರೆಯ ಐಸಿಯು ಒಳಗಿನಿಂದ ಅಹ್ಮದ್ ಮಾಮದೌ ಎಂಬುವವರು ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶನಿವಾರ ಅಪ್ ಲೋಡ್ ಮಾಡಿದ್ದಾರೆ. ತಮ್ಮ ಸಂಬಂಧಿಯೊಬ್ಬರು ಈಗ ತಾನೇ ಮೃತಪಟ್ಟರು. ಇನ್ನೂ ಕೆಲವು ರೋಗಿಗಳಿಗೆ ಆಮ್ಲಜನಕ ಸಿಗದೇ ನರ್ಸ್ ಕೈಯ್ಯಿಂದ ಆಮ್ಲಜನಕ ಒತ್ತುತ್ತಿರುವ ದೃಶ್ಯವನ್ನು ಅವರು ವಿಡಿಯೋದಲ್ಲಿ ತೋರಿಸಿದ್ದಾರೆ.
ಗರ್ಬಿಯಾದ ಝೆಪ್ಟಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ತನ್ನ ಸಂಬಂಧಿಯನ್ನು ಬದುಕಿಸಿಕೊಡುವಂತೆ ಮನವಿ ಮಾಡುತ್ತಿರುವ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್ ಆಗಿದೆ. ನರ್ಸ್ ಒಬ್ಬರು ಬೇಸರದಿಂದ ಕುಳಿತ ಇನ್ನೊಂದು ಪೋಟೋ ಸಹ ಹರಿದಾಡುತ್ತಿದೆ. ಈ ಸಂಬಂಧ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=QwS084N_acA&feature=emb_logo