ಜಗತ್ತು ಕಂಡ ಅತ್ಯಂತ ಘೋರ ಪರಮಾಣು ದುರಂತ ಘಟಿಸಿದ ಜಾಗದಲ್ಲಿ ವಿಕಿರಣದ ಮಟ್ಟವನ್ನು ಅಳೆಯಲು ಮಾಡಬಹುದಾದ ಅತ್ಯಂತ ಸುರಕ್ಷಿತ ಮಾರ್ಗ ಎಂಬುದಾದರೂ ಇದೆಯಾ?
ಬ್ರಿಸ್ಟಾಲ್ನ ವಿಕಿರಣ ತ್ಯಾಜ್ಯ ನಿರ್ವಹಣಾ ಸಂಸ್ಥೆಯ ವಿಜ್ಞಾನಿಗಳು ಇದಕ್ಕೆಂದೇ ನಾಲ್ಕು ಕಾಲುಗಳ ರೋಬೊಟ್ ಒಂದನ್ನು ನೇಮಕ ಮಾಡಿದ್ದಾರೆ. ಸ್ಪಾಟ್ ಹೆಸರಿನ ಈ ರೋಬೋ ನಾಯಿಯನ್ನು ಬೋಸ್ಟನ್ ಡೈನಾಮಿಕ್ಸ್ ಅಭಿವೃದ್ಧಿಪಡಿಸಿದೆ.
ಚರ್ನೋಬಿಲ್ ಪರಮಾಣು ರಿಯಾಕ್ಟರ್ನ ನಾಲ್ಕನೇ ಸ್ಥಾವರದ ಬಳಿ ವಿಕಿರಣ ಪ್ರಮಾಣ ಯಾವ ಮಟ್ಟದಲ್ಲಿದೆ ಎಂದು ಅರಿಯಲು ಈ ರೋಬೋವನ್ನು ಬಿಡಲಾಗಿದೆ. ಇದರೊಂದಿಗೆ ವಿಕರಿಣಗಳ ಮಟ್ಟದ 3D ನಕ್ಷೆಯನ್ನೂ ಸಿದ್ಧಪಡಿಸಲು ಈ ರೋಬೋಗೆ ಪ್ರೋಗ್ರಾಮಿಂಗ್ ಮಾಡಲಾಗಿದೆ.