ಇಡೀ ವಿಶ್ವದ ಚಿಂತೆಗೀಡು ಮಾಡಿರುವ ಕೊರೋನಾದಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸುವುದು ಸೂಕ್ತ. ಆದ್ದರಿಂದಲೇ ಇದೀಗ ಎಲ್ಲೆಡೆ ಮಾಸ್ಕ್ ಧರಿಸದಿದ್ದರೆ ಎಂಟ್ರಿ ಇಲ್ಲ ಎನ್ನುತ್ತಾರೆ. ಆದರೆ ಮಹಿಳೆಯೊಬ್ಬಳಿಗೆ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೇ ವಾರಿಯರ್ ಮೇಲೆ ಉಗುಳಿರುವ ಘಟನೆ ನಡೆದಿದೆ.
ಕೊಲೊರಾಡೋದಲ್ಲಿ ಈ ಘಟನೆ ನಡೆದಿದ್ದು ಮಾಸ್ಕ್ ಧರಿಸಿ ಎಂದು ಮಹಿಳೆಗೆ ಸಿಬ್ಬಂದಿ ಹೇಳಿದ್ದಕ್ಕೆ ಸಿಟ್ಟಿಗೆದ್ದ ಈ ರೀತಿ ಉದ್ದಟತನ ತೋರಿದ್ದಾರೆ. ಜಿಲ್ ಎನ್ನುವವರು ಈ ವಿಡಿಯೋ ಮಾಡಿದ್ದು ವೈರಲ್ ಆಗಿದೆ.
ಮಹಿಳೆಯ ವರ್ತನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದು, ಆಕೆಯ ಒಳಿತಿಗೆ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಈ ರೀತಿ ಮಾಡಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ.
https://twitter.com/Jillcattt/status/1277107605060476928?ref_src=twsrc%5Etfw%7Ctwcamp%5Etweetembed%7Ctwterm%5E1277107605060476928%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fvideo-showing-karen-spitting-on-essential-worker-asking-her-to-wear-mask-has-left-people-fuming-2694023.html
https://twitter.com/craftwithyarn/status/1277693165903007746?ref_src=twsrc%5Etfw%7Ctwcamp%5Etweetembed%7Ctwterm%5E1277693165903007746%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Fvideo-showing-karen-spitting-on-essential-worker-asking-her-to-wear-mask-has-left-people-fuming-2694023.html