
ಪಾಕಿಸ್ತಾನದ ರೆಸ್ಟೋರೆಂಟ್ನಲ್ಲಿ ನಡೆದ ಘಟನೆ ಇದಾಗಿದೆ. ಉಜ್ಮಾ ಹಾಗೂ ದಿಯಾ ಎಂದು ಗುರುತಿಸಿಕೊಳ್ಳುವ ಇಬ್ಬರು ಮಹಿಳೆಯರು ತಮ್ಮ ಕೆನ್ನೊಲಿ ಬೈ ಕೆಫೆ ಸೋಲ್ ಎಂಬ ರೆಸ್ಟೋರೆಂಟ್ನಲ್ಲಿ ಕಳೆದ 9 ವರ್ಷಗಳಿಂದ ಮ್ಯಾನೇಜರ್ ಆಗಿದ್ದ ವ್ಯಕ್ತಿಯ ಇಂಗ್ಲೀಷ್ ಕೌಶಲ್ಯವನ್ನ ವ್ಯಂಗ್ಯ ಮಾಡಿದ್ದಾರೆ. ಆತ ಇಂಗ್ಲೀಷ್ ಮಾತನಾಡೋಕೆ ಬಡಬಡಾಯಿಸುತ್ತಿದ್ದ ವೇಳೆ ಈ ಮಾಲೀಕೆಯರಿಬ್ಬರು ಬಿದ್ದು ಬಿದ್ದು ನಗುತ್ತಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೇ ಮಹಿಳೆಯರಿಬ್ಬರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಪಾಕಿಸ್ತಾನಿ ನೆಟ್ಟಿಗರು ಈ ಕೆಫೆಯನ್ನ ಬಾಯ್ಕಾಟ್ ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಿದ್ದರು.