
ಮದರಂಗಿಯನ್ನ ಸಾಮಾನ್ಯವಾಗಿ ಕೈಯನ್ನ ಅಲಂಕಾರ ಮಾಡಿಕೊಳ್ಳೋಕೆ ಬಳಕೆ ಮಾಡ್ತೇವೆ. ಇದನ್ನ ಬಿಟ್ರೆ ಕೂದಲಿನ ಆರೈಕೆಗೆ ಬಳಕೆ ಮಾಡಬಹುದು. ಆದರೆ ಚಿಕಾಗೋದ ಮಾಡೆಲ್ ಒಬ್ರು ಮೇಕಪ್ ಮಾಡಿಕೊಳ್ಳಲು ಮದರಂಗಿ ಬಳಕೆ ಮಾಡುವ ಮೂಲಕ ಟ್ರೋಲ್ ಆಗಿದ್ದಾರೆ.
ಬ್ರಿನ್ನಾ ಎಂಬ ಹೆಸರಿನ ಮಹಿಳೆ ಬೀಟ್ರೂಟ್ ಹಾಗೂ ರೋಸ್ವಾಟರ್ ಜೊತೆ ಮದರಂಗಿಯನ್ನೂ ಮುಖದ ಅಲಂಕಾರಕ್ಕೆ ಬಳಸಿ ನಗೆಪಾಟಲಿಗೀಡಾಗಿದ್ದಾರೆ.
ಅಲ್ಲದೇ ಅನೇಕರು ಈ ರೀತಿಯ ಮೆಹಂದಿ ಬಳಕೆಯಿಂದ ಮುಖದ ಆರೋಗ್ಯಕ್ಕೆ ಸಂಚಕಾರವಾಗಲಿದೆ ಅಂತಾ ವಾರ್ನಿಂಗ್ ಕೂಡ ನೀಡಿದ್ದಾರೆ.