
ಆದರೆ ಬಾಹ್ಯಾಕಾಶದಲ್ಲಿರುವವರು ಏನು ಮಾಡಬೇಕು ಹೇಳಿ..? ಇದಕ್ಕೂ ಪರಿಹಾರ ಕಂಡುಕೊಂಡಿರುವ ಗಗನಯಾತ್ರಿಗಳು ಬಾಹ್ಯಾಕಾಶದಲ್ಲೇ ಈ ಕಾರ್ಯಕ್ರಮವನ್ನ ಆಚರಿಸಿದ್ದಾರೆ.
ಐಎಸ್ಎಸ್ನ ಬಾಹ್ಯಾಕಾಶ ನಿಲ್ದಾಣ ಇತ್ತೀಚೆಗೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅಮೆರಿಕದ ಗಗನಯಾತ್ರಿಗಳು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನ ಬಾಹ್ಯಾಕಾಶದಲ್ಲಿದ್ದೇ ಸೇವನೆ ಮಾಡಿದ್ದಾರೆ. ಹಾಗೂ ಬಾಹ್ಯಾಕಾಶದಲ್ಲಿದ್ದೇ ಥ್ಯಾಂಕ್ಸ್ ಗಿವಿಂಗ್ ಹಬ್ಬವನ್ನ ಆಚರಣೆ ಮಾಡಿದ್ದಾರೆ.
2020ರ ಅಧ್ಯಕ್ಷೀಯ ಚುನಾವಣೆ ವೇಳೆಯೂ ಬಾಹ್ಯಾಕಾಶದಲ್ಲಿದ್ದುಕೊಂಡೇ ಮತ ಚಲಾಯಿಸೋದ್ರ ಮೂಲಕ ಅಮೆರಿಕದ ಗಗನಯಾತ್ರಿಗಳು ಈ ಹಿಂದೆ ಸುದ್ದಿಯಾಗಿದ್ರು.