ಕೋವಿಡ್ ಸಾಂಕ್ರಮಿಕದ ಕಾರಣದಿಂದ 200 ದಿನಗಳ ಮಟ್ಟಿಗೆ ದೂರವಿದ್ದು ಮತ್ತೆ ಒಂದಾದ ಹಿರಿಯ ದಂಪತಿಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಲಾರಿಡಾ ಮೂಲದ ಈ ದಂಪತಿಗಳು 60 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ವೈರಸ್ ಹಬ್ಬದಂತೆ ತರಲಾದ ಲಾಕ್ಡೌನ್ ನಿಯಂತ್ರಣಗಳ ಕಾರಣದಿಂದ ಈ ಇಬ್ಬರೂ ಕಳೆದ 215 ದಿನಗಳ ಮಟ್ಟಿಗೆ ದೂರವಿದ್ದರು. ಕಳೆದ ವೀಕೆಂಡ್ನಲ್ಲಿ ಮತ್ತೆ ಒಂದುಗೂಡಿ ಇಬ್ಬರ ಸಂತಸದ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ.
ಏಳು ತಿಂಗಳ ಬಳಿಕ ಮೊದಲ ಬಾರಿಗೆ ಭೇಟಿಯಾಗಿ ಭಾವುಕರಾದ ದಂಪತಿಯ ಆಲಿಂಗನದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
https://www.facebook.com/rosecastleatdelaneycreek/posts/3749704815063708