
ಸಾಮಾನ್ಯವಾಗಿ ನಾವೆಲ್ಲಾ ಕಾರ್ಟೂನ್ ನೆಟ್ ವರ್ಕ್‌ನ ಟಾಮ್ & ಜೆರ‍್ರಿ ಕಂತುಗಳನ್ನು ನೋಡಿಕೊಂಡೇ ಬೆಳೆದು ದೊಡ್ಡವರಾದವರು. ಕೆಲವೊಮ್ಮೆ ಬೆಕ್ಕು & ಇಲಿಗಳ ನಡುವೆ ಕಾಳಗದ ಬಗ್ಗೆ ಕೇಳಿದಾಗೆಲ್ಲಾ ನಮ್ಮ ಮನಸ್ಸಿಗೆ ಮೊದಲು ಬರುವುದೇ ಈ ಟಾಮ್ & ಜೆರ‍್ರಿ ಕಾರ್ಟೂನ್ ಪಾತ್ರಗಳು.
ಟ್ವಿಟರ್‌ನಲ್ಲಿ ವಿಡಿಯೋವೊಂದು ತೇಲಾಡುತ್ತಿದ್ದು, ಅದರಲ್ಲಿ ಬೆಕ್ಕು ಹಾಗೂ ಇಲಿ, ಲೋಕದ ಪರಿವೇ ಇಲ್ಲದೇ ತಮ್ಮ ಪಾಡಿಗೆ ತಾವು ಅಡ್ಡಾಡುತ್ತಾ ಇರುವುದನ್ನು ಸೆರೆ ಹಿಡಿಯಲಾಗಿದೆ. ಅವೆರಡೂ ಪರಸ್ಪರ ಕಾಳಗಕ್ಕೆ ಮುಂದಾಗದೇ ಪರಸ್ಪರ ಅನ್ಯೋನ್ಯವಾಗಿ ಸಾಗುತ್ತಿರುವುದನ್ನು ಕಂಡ ನೆಟ್ಟಿಗರು ಸಖತ್ ಥ್ರಿಲ್ ಆಗಿದ್ದಾರೆ.