alex Certify ಅಶ್ಲೀಲ ವಿಡಿಯೋ ನೋಡಿದ್ರೆ ಸಿಗುತ್ತೆ ಗಂಟೆಗೆ 1500 ರೂಪಾಯಿ….! ವಿಚಿತ್ರ ಜಾಬ್ ಆಫರ್‌ ಗೆ ಮುಗಿಬಿದ್ದಿದ್ದಾರೆ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ವಿಡಿಯೋ ನೋಡಿದ್ರೆ ಸಿಗುತ್ತೆ ಗಂಟೆಗೆ 1500 ರೂಪಾಯಿ….! ವಿಚಿತ್ರ ಜಾಬ್ ಆಫರ್‌ ಗೆ ಮುಗಿಬಿದ್ದಿದ್ದಾರೆ ಜನ

ಇಲ್ಲೊಂದು ವಿಲಕ್ಷಣ ಜಾಬ್ ಆಫರ್ ಇದೆ. ಇಲ್ಲಿ ಕೆಲಸ ಮಾಡಿ ನೀವು ಆಯಾಸ ಮಾಡಿಕೊಳ್ಳಬೇಕಾಗಿಲ್ಲ, ನಿಮ್ಮ ಬುದ್ಧಿವಂತಿಕೆಯನ್ನೂ ಉಪಯೋಗಿಸಬೇಕಾಗಿಲ್ಲ. ಆರಾಮಾಗಿ ಕುಳಿತುಕೊಂಡು ವಿಡಿಯೋ ನೋಡಿ ಆನಂದಿಸಬೇಕು ಅಷ್ಟೆ.

ಅಶ್ಲೀಲ ವಿಡಿಯೋಗಳನ್ನು ನೋಡಿ, ಸರಿಯಾಗಿ ಪರಿಶೀಲಿಸುವ ವಿಭಿನ್ನವಾದ ಕೆಲಸದ ಆಫರ್‌ ಒಂದನ್ನು ಕಂಪನಿ ನೀಡಿದೆ. ಇದಕ್ಕಾಗಿ ಉದ್ಯೋಗಿಗಳಿಗೆ ಗಂಟೆಗೆ 1500 ರೂಪಾಯಿ ಕೊಡುವುದಾಗಿ ಹೇಳಿದೆ.

ಈ ಪ್ರಕಟಣೆ ಹೊರಬಿದ್ದಿದ್ದೇ ತಡ ಕೇವಲ 2 ದಿನಗಳಲ್ಲಿ 31 ಸಾವಿರಕ್ಕೂ ಹೆಚ್ಚು ಜನರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಕಂಪನಿಯ ಹೆಸರು Bedbible. ಕಂಪನಿಯು ವಯಸ್ಕ ಉತ್ಪನ್ನಗಳನ್ನು ವಿಮರ್ಶೆ ಮಾಡುತ್ತದೆ. ವಿಶೇಷ ಅಂದ್ರೆ ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು, ಯಾಕಂದ್ರೆ ಎಲ್ಲಿ ಬೇಕಾದ್ರೂ ಕುಳಿತು ಮಾಡಬಹುದಾದ ಕೆಲಸ ಇದು. ಇದಕ್ಕಾಗಿ ಕಚೇರಿಗೆ ಬರುವ ಅವಶ್ಯಕತೆ ಇಲ್ಲ.

ಬೆಡ್‌ಬೈಬಲ್ ಕಂಪನಿ ಈ ಕೆಲಸಕ್ಕೆ ಯಾವ ಉದ್ಯೋಗಿಯನ್ನು ಆರಿಸಿಕೊಂಡರೂ, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ವಿಡಿಯೋದ ಸಮಯ, ಪುರುಷ-ಹೆಣ್ಣಿನ ಅನುಪಾತ, ಕೂದಲಿನ ಬಣ್ಣ, ಭಾಷೆ ಮುಂತಾದ ಡೇಟಾವನ್ನು ಬಳಸಿಕೊಂಡು ವಿವರವಾದ ವರದಿಯನ್ನು ರಚಿಸುತ್ತದೆ. ಆಯ್ಕೆಯಾದ ಉದ್ಯೋಗಿ 50 ಗಂಟೆಗಳ ಕಾಲ ವಯಸ್ಕರ ವೀಡಿಯೊಗಳನ್ನು ವೀಕ್ಷಿಸಬೇಕಾಗುತ್ತದೆ. ಇದಕ್ಕಾಗಿ ಒಟ್ಟು 75 ಸಾವಿರ ರೂಪಾಯಿಯನ್ನು ಕಂಪನಿ ಪಾವತಿಸುತ್ತದೆ.

21 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಬೆಡ್‌ಬೈಬಲ್ ಕಂಪನಿಯ ಮುಖ್ಯ ಕಂಟೆಂಟ್ ಕ್ರಿಯೇಟರ್ ಎಡ್ವಿನಾ ಕೈಟೊ ಪ್ರಕಾರ, ‘ಅಶ್ಲೀಲ ವಿಡಿಯೋಗಳದ್ದು ಶತಕೋಟಿ ಡಾಲರ್ ಉದ್ಯಮವಾಗಿದೆ. ಹೊಸಬರನ್ನು ಆಯ್ಕೆ ಮಾಡಿಕೊಂಡು ಆ ಉದ್ಯೋಗಿಗಳ ಮೂಲಕ ಸಾಧ್ಯವಾಗುವ ಸಂಶೋಧನೆ ಅನೇಕ ಹೊಸ ವಿಷಯಗಳನ್ನು ಬಹಿರಂಗಪಡಿಸುತ್ತದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...