ವಿಶ್ವದ ಚಿತ್ರಣವನ್ನು ಕೊರೊನಾ ಸಂಪೂರ್ಣವಾಗಿ ಬದಲಿಸಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಡಬ್ಲ್ಯುಎಚ್ ಒ ಮಹತ್ವದ ಸೂಚನೆ ಒಂದನ್ನು ನೀಡಿದೆ.
ಕೊರೊನಾ ವೈರಸ್ ವಿರುದ್ಧದ ಪ್ರಗತಿ ದುರ್ಬಲವಾಗಿದೆ. ಈ ಸಂದರ್ಭದಲ್ಲಿ ಸಾಗರೋತ್ತರ ಪ್ರವಾಸ ತಪ್ಪಿಸಬೇಕೆಂದು ಡಬ್ಲ್ಯುಎಚ್ಒ ಹೇಳಿದೆ. ಇದೇ ವೇಳೆ ಲಸಿಕೆ ಕೊರೊನಾ ರೂಪಾಂತರದ ವಿರುದ್ಧ ಹೋರಾಡಲು ಪರಿಣಾಮಕಾರಿಯಾಗಿದೆ ಎಂದು ಡಬ್ಲ್ಯುಎಚ್ಒ ಹೇಳಿದೆ.
ಕೊರೊನಾ ಬಗ್ಗೆ ನಿರಂತರ ಹೆದರಿಕೆಯಿದೆ. ಹೊಸ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ನಾವು ಎಚ್ಚರಿಕೆಯಿಂದ ಮುಂದುವರಿಯಬೇಕು. ಅಂತರರಾಷ್ಟ್ರೀಯ ಪ್ರಯಾಣವನ್ನು ಪುನರ್ವಿಮರ್ಶಿಸಬೇಕು ಇಲ್ಲವೆ ತಪ್ಪಿಸಬೇಕು ಎಂದು ಹ್ಯಾನ್ಸ್ ಕ್ಲುಗೆ ಹೇಳಿದ್ದಾರೆ.
ಭಾರತದ ರೂಪಾಂತರ ಕೊರೊನಾ ಹೆಚ್ಚು ಹರಡುತ್ತಿದ್ದು, ಯುರೋಪ್ನ 53 ದೇಶಗಳಲ್ಲಿ ಕನಿಷ್ಠ 26 ದೇಶಗಳಲ್ಲಿ ಈ ರೂಪಾಂತರವನ್ನು ಗುರುತಿಸಲಾಗಿದೆ. ಆದ್ರೆ ಲಸಿಕೆಗಳು ಹೊಸ ರೂಪಾಂತರದ ವಿರುದ್ಧ ಪರಿಣಾಮಕಾರಿ ಎಂದು ಅವರು ಹೇಳಿದ್ದಾರೆ. ಶೇಕಡಾ 23 ಮಂದಿ ಮಾತ್ರ ಕೊರೊನಾದ ಮೊದಲ ಡೋಸ್ ಪಡೆದಿದ್ದಾರೆ. ಶೇಕಡಾ 11 ಮಂದಿಗೆ ಮಾತ್ರ ಕೊರೊನಾ ಎರಡು ಡೋಸ್ ಆಗಿದೆ ಎಂದವರು ಹೇಳಿದ್ದಾರೆ.