ಮಾಸ್ಕೋ: ವಿಶ್ವದ ಮೊದಲ ಕೊರೋನಾ ಲಸಿಕೆ ಬಿಡುಗಡೆಯಾಗಿದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿಯ ಮೇಲೆ ಪ್ರಯೋಗಿಸಲಾಗಿದೆ.
ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೋನಾ ತಡೆಗೆ ಜಗತ್ತಿನ ಮೊದಲ ಲಸಿಕೆ ಬಿಡುಗಡೆಯಾಗಿದೆ. ರಷ್ಯಾ ಲಸಿಕೆ ಬಗ್ಗೆ ಘೋಷಣೆ ಮಾಡಿದ್ದು ಸ್ಪುಟ್ನಿಕ್ 5 ಎಂದು ಹೆಸರಿಡಲಾಗಿದೆ. ರಷ್ಯಾ ಅಧ್ಯಕ್ಷರ ಪುತ್ರಿಯ ಮೇಲೆ ಕೊರೋನಾ ಲಸಿಕೆಯನ್ನು ಪ್ರಯೋಗಿಸಲಾಗಿದೆ. ಈಗಾಗಲೇ 20 ದೇಶಗಳಿಂದ 100 ಕೋಟಿ ಲಸಿಕೆಗೆ ಬೇಡಿಕೆ ಬಂದಿದೆ.
5 ದೇಶಗಳಲ್ಲಿ 50 ಕೋಟಿ ಲಸಿಕೆ ಉತ್ಪಾದನೆಗೆ ರಷ್ಯಾ ಸಿದ್ಧತೆ ಕೈಗೊಂಡಿದೆ. 2021ರ ಜನವರಿ 1ರಿಂದ ನಾಗರಿಕ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ವಿಶ್ವದಾದ್ಯಂತ ಲಸಿಕೆ ಅಭಿವೃದ್ಧಿ ಪ್ರಯತ್ನಗಳು ಮುಂದುವರೆದಿದ್ದು ಅನೇಕ ಪ್ರಯೋಗಗಳು ಯಶಸ್ವಿಯಾಗಿವೆ. ರಷ್ಯಾ ಮೊದಲಿಗೆ ಲಸಿಕೆ ಬಿಡುಗಡೆ ಮಾಡಿದೆ.