ನವದೆಹಲಿ: ವರ್ಷಾಂತ್ಯದೊಳಗೆ ಕೊರೋನಾದ ಲಸಿಕೆ ಲಭ್ಯವಾಗುವ ಸಾಧ್ಯತೆ ಇಲ್ಲವೆಂದು ಹೇಳಲಾಗಿದೆ.
ಕೊರೋನಾ ಸೋಂಕು ನಿಯಂತ್ರಿಸಲು ಪರಿಣಾಮಕಾರಿಯಾದ ಅಭಿವೃದ್ಧಿಪಡಿಸುವಲ್ಲಿ ನಿರತರಾಗಿರುವ ತಜ್ಞರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು, ವರ್ಷದೊಳಗೆ ಪರಿಣಾಮಕಾರಿ ಲಸಿಕೆ ಲಭ್ಯವಾಗುವ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ.
ಕೆನಡಾದ ಮೆಕ್ ಗಿಲ್ ವಿಶ್ವವಿದ್ಯಾಲಯದ ಸಂಶೋಧಕರು ತಜ್ಞರ ಸಮೀಕ್ಷೆ ನಡೆಸಿದ್ದು ಅಮೆರಿಕ ನೀಡಿರುವ ಮಾಹಿತಿಯಂತೆ, 2021 ರ ವೇಳೆಗೆ ಲಸಿಕೆ ಲಭ್ಯವಾಗುವ ಬಗ್ಗೆಯೂ ತಜ್ಞರಲ್ಲಿ ವಿಶ್ವಾಸ ವ್ಯಕ್ತವಾಗಿಲ್ಲ. ಮೆಕ್ ಗಿಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನ್ ಥಾನ್ ಅವರು, ಸಾರ್ವಜನಿಕರಿಗೆ ಸದ್ಯಕ್ಕೆ ಲಸಿಕೆ ಲಭ್ಯವಾಗುವ ವಿಶ್ವಾಸವಿಲ್ಲ ಎಂಬ ಅಭಿಪ್ರಾಯ ತಜ್ಞರಿಂದ ಬಂದಿದೆ ಎಂದು ತಿಳಿಸಿದ್ದಾರೆ.
ಜರ್ನಲ್ ಅಫ್ ಜನರಲ್ ಇಂಟರ್ನಲ್ ಮೆಡಿಸನ್ ಪತ್ರಿಕೆಯ ಹಿರಿಯ ಲೇಖಕ ಕಿಮ್ಮೆಲ್ ಮೆನ್, ಮುಂದಿನ ಬೇಸಿಗೆ ಇಲ್ಲವೇ 2022ರ ವೇಳೆಗೆ ಕೊರೋನಾಗೆ ಪರಿಣಾಮಕಾರಿಯಾದ ಲಸಿಕೆ ಸಿಗಬಹುದು ಎಂದು ಹೇಳಿದ್ದಾರೆ.