ಲಂಡನ್: ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಅಭಿವೃದ್ಧಿಪಡಿಸಿದ ಲಸಿಕೆ ಮಾನವ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾಗಿದ್ದು ಎರಡು ಪಟ್ಟು ಸುರಕ್ಷತೆ ನೀಡುತ್ತದೆ ಎನ್ನುವ ಅಂಶ ಗೊತ್ತಾಗಿದೆ.
ರಕ್ತದಲ್ಲಿರುವ ನಿರೋಧಕ ಕಣ ಮತ್ತು ವೈರಸ್ ಇರುವ ಕೋಶಗಳನ್ನು ನಾಶಮಾಡಬಲ್ಲ ಬಿಳಿ ರಕ್ತ ಕಣದ ಒಂದು ಮಾದರಿ ಹುಟ್ಟುಹಾಕುವಂತಹ ಸಾಮರ್ಥ್ಯವನ್ನು ಆಕ್ಸ್ ಫರ್ಡ್ ಸಂಶೋಧಕರ ತಂಡ ಅಭಿವೃದ್ಧಿಪಡಿಸಿರುವ ಲಸಿಕೆ ಹೊಂದಿದೆ ಎನ್ನುವುದು ಸಂಶೋಧನೆಯಲ್ಲಿ ತಿಳಿದುಬಂದಿದೆ.
ಲಸಿಕೆ ಪ್ರಯೋಗಕ್ಕೆ ಒಪ್ಪಿಗೆ ನೀಡಿರುವ ಬರ್ಕ್ ಶೈಯರ್ ಸಂಶೋಧನಾ ಸಮಿತಿ ಅಧ್ಯಕ್ಷ ಡೇವಿಡ್ ಕಾರ್ಪೆಂಟರ್ ಕುರಿತು ಮಾಹಿತಿ ನೀಡಿ, ಮಾನವ ದೇಹಕ್ಕೆ ಎರಡುಪಟ್ಟು ಸುರಕ್ಷತೆ ನೀಡುವ ಲಸಿಕೆ ಸೆಪ್ಟೆಂಬರ್ ವೇಳೆಗೆ ಬಳಕೆಗೆ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.