ಕೊರೋನ ವೈರಸ್ ಸಾಂಕ್ರಾಮಿಕ ರೋಗ ಜನಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಆತ್ಮೀಯರೊಂದಿಗೆ ಅಂತರ ಕಾಯ್ದುಕೊಂಡು ಮಾತನಾಡಬೇಕಾದ ಸ್ಥಿತಿಯಿದೆ. ಅಪ್ಪುಗೆ ಎಂಬುದು ಇಲ್ಲವಾಗಿದೆ.
ಈ ನಡುವೆ 70 ದಿನಗಳ ಬಳಿಕ ಮುಖಾಮುಖಿಯಾದ ತಾಯಿ-ಮಗಳು ವಿಶೇಷ ರೀತಿಯಲ್ಲಿ ಅಪ್ಪುಗೆಯೊಂದಿಗೆ ಸಂಭ್ರಮಿಸಿದರು, ಅದಕ್ಕವರು ಪ್ಲಾಸ್ಟಿಕ್ ಕರ್ಟನ್ ಬಳಸಿದ್ದರು.
ಬ್ರೆಜಿಲ್ ನ ಸಾವೋಪಾಲೊದಲ್ಲಿನ ನರ್ಸಿಂಗ್ ಹೋಂನಲ್ಲಿ ಇದ್ದ 93 ವರ್ಷದ ತಾಯಿ ತನ್ನ ಮಗಳನ್ನು 70ದಿನಗಳಿಂದ ನೋಡಲು ಸಾಧ್ಯವಾಗಿರಲಿಲ್ಲ. ಕಳೆದ ವಾರದಲ್ಲಿ ಇವರಿಬ್ಬರ ಪುನರ್ಮಿಲನವಾಯಿತು.
ಪ್ಲಾಸ್ಟಿಕ್ ಪರದೆಯೊಂದನ್ನು ಸಿದ್ಧಮಾಡಿ ಅದರೊಳಗೆ ಅಪ್ಪುಗೆ ಮಾಡಲು ಸೂಕ್ತವಾಗುವಂತೆ ಕೈ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಸ್ಥಳೀಯ ವ್ಯಾಪಾರಿ, ಪಾರ್ಟಿ ಡೆಕೋರೇಟರ್ ಬ್ರೂನೋ ಜಾನಿ ಇದನ್ನು ಸಿದ್ಧ ಮಾಡಿದ್ದರು. ತಜ್ಞರೊಂದಿಗೆ ಸಭೆ ನಡೆಸಿದ ನಂತರ ಪ್ಲಾಸ್ಟಿಕ್ ಪರದೆಯ ಕಲ್ಪನೆಯ ಪರದೆಯನ್ನು ಅಲ್ಲಿ ತರಲಾಗಿತ್ತು. ತಾಯಿ-ಮಗಳು ಅಪ್ಪಿಕೊಳ್ಳುವ ವಿಡಿಯೋ ಈಗ ವೈರಲ್ ಆಗಿದೆ.