ವಾಷಿಂಗ್ಟನ್: ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಅಭಿವೃದ್ಧಿಪಡಿಸುತ್ತಿರುವ ಎರಡು ಲಸಿಕೆ ಪ್ರಯೋಗ ಕೊನೆಯ ಹಂತದಲ್ಲಿದ್ದು, ವರದಿ ಸಿದ್ಧಪಡಿಸಲಾಗುತ್ತಿದೆ.
ಅಮೆರಿಕದಲ್ಲಿ ನಡೆಯುತ್ತಿರುವ ನೂರಾರು ಕೊರೊನಾ ಲಸಿಕೆ ಪ್ರಯೋಗಗಳಲ್ಲಿ ಎರಡು ಲಸಿಕೆಗಳು ಕೊನೆಯ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವತ್ತ ಹೆಜ್ಜೆ ಇಟ್ಟಿವೆ. ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ ಸಹಯೋಗದಲ್ಲಿ ಮಾಡೆರ್ನಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮತ್ತು ಔಷಧ ತಯಾರಿಕೆ ಕಂಪನಿ ಪಿಫೈಝರ್ ತಯಾರಿಸುತ್ತಿರುವ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.
ಸಮುದಾಯದಲ್ಲಿ ಹಲವರ ಮೇಲೆ ಪ್ರಾಯೋಗಿಕವಾಗಿ ಲಸಿಕೆ ಪ್ರಯೋಗ ನಡೆಸಿ ಪರಿಶೀಲನೆ ನಡೆಸಲಾಗಿದೆ. ಜಾರ್ಜಿಯಾದಲ್ಲಿ ಅಂತಿಮ ಹಂತದ ಪರೀಕ್ಷೆಯನ್ನು ನಡೆಸಲಾಗಿದೆ. 30 ಸಾವಿರ ಜನರಿಗೆ ಲಸಿಕೆ ನೀಡಿ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ ವರದಿ ಸಿದ್ಧಪಡಿಸಲಾಗುವುದು ಎಂದು ಹೇಳಲಾಗಿದೆ.