ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕಾದ ಮಹಿಳೆಯರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಹೆಚ್ಚಾಗಿದೆಯಂತೆ. ಎರಡು ದಿನಗಳ ಹಿಂದೆ ಪ್ರಕಟವಾದ ಹೊಸ ಅಧ್ಯಯನ ವರದಿ ಪ್ರಕಾರ. 2019ರಲ್ಲಿ ಮಹಿಳೆಯರು ಸೇವಿಸುತ್ತಿದ್ದ ದಿನಗಳಿಗೆ ಹೋಲಿಸಿದರೆ ಈಗ ಹೆಚ್ಚಾಗಿದೆ (ತಿಂಗಳಿಗೆ 5.4 ದಿನ)ಎಂದು ಸಂಶೋಧಕರು ಕಂಡುಕೊಂಡಿದ್ದಾರೆ
ಇದಕ್ಕಿಂತ ಹೆಚ್ಚಾಗಿ, ಕೋವಿಡ್ ಸಮಯದಲ್ಲಿ ಮಹಿಳೆಯರು ಕುಡಿಯುವ ಅವಧಿ ಕೂಡ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಅದಿಷ್ಟೇ ಅಲ್ಲದೆ ಪುರುಷರು ಒಂದೆರೆಡು ಗಂಟೆಗಳಲ್ಲಿ ಐದು ಮತ್ತು ಅದಕ್ಕಿಂತ ಹೆಚ್ಚು ಪಾನೀಯ ಬಳಸಿದರೆ ನಾಲ್ಕು ಮತ್ತು ಹೆಚ್ಚು ಪಾನೀಯವನ್ನು ಮಹಿಳೆಯರು ಬಳಸಿದ್ದಾರೆ.
2019 ರ ಏಪ್ರಿಲ್-ಜೂನ್‌ನಿಂದ ಸಮೀಕ್ಷೆಯ ಡೇಟಾವನ್ನು ಮತ್ತು 2020ರ ಮೇ-ಜೂನ್ 2020ಕ್ಕೆ ಹೋಲಿಸಿ ವಿಶ್ಲೇಷಿಸಲಾಗಿದೆ. ಈ ಹಿಂದೆ ಡೇಟಾ ಸಂಸ್ಥೆ ನೀಲ್ಸನ್, ಆಲ್ಕೋಹಾಲ್ ಮಾರಾಟದಲ್ಲಿ 2020 ಜೂನ್ ವೇಳೆಗೆ 21 ಪ್ರತಿಶತದಷ್ಟು ಹೆಚ್ಚಳವಾಗಿದ್ದನ್ನು ಪ್ರಸ್ತಾಪಿಸಿತ್ತು.