ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಕೊರೊನಾ ಬಂತು ಅಂದರೆ ಜೀವ ಉಳಿಯೋದು ಕಷ್ಟ ಅಂತಾ ವೈದ್ಯಲೋಕವೇ ಅಭಿಪ್ರಾಯಪಟ್ಟಿದೆ.
ಅಂತದ್ರಲ್ಲಿ ಕ್ಯಾನ್ಸರ್ ರೋಗಿಯೊಬ್ಬರ ದೇಹದಲ್ಲಿ 105 ದಿನಗಳ ಕಾಲ ಕೊರೊನಾ ವೈರಸ್ ಇದ್ದರೂ ಸಹ ಒಂದೇ ಒಂದು ಲಕ್ಷಣ ಕಾಣಿಸಿಕೊಳ್ಳದೇ ಇರೋದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ನಾವು ಈ ಅಧ್ಯಯನವನ್ನ ಆರಂಭಿಸಿದಾಗ ನಮಗೆ ಕೊರೊನಾ ವೈರಸ್ ಹರಡುವಿಕೆ ಅವಧಿ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ ಅಂತಾ ಅಧ್ಯಯನದ ಹಿರಿಯ ಲೇಖಕ ಹಾಗೂ ಅಮೆರಿಕದ ಸಾಂಕ್ರಮಿಕ ರೋಗಗಳ ವೈರಲಾಜಿಸ್ಟ್ ವಿನ್ಸೆಂಟ್ ಮನ್ಸ್ಟರ್ ಹೇಳಿದ್ದಾರೆ.
ದೀರ್ಘಕಾಲದ ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿದ್ದ 71 ವರ್ಷದ ಮಹಿಳೆ ಬರೋಬ್ಬರಿ 105 ದಿನಗಳ ಕಾಲ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಆದರೆ ಆಕೆಯಲ್ಲಿ ಕೊರೊನಾದ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ಸಂಶೋಧಕರು ಹೇಳಿದ್ದಾರೆ.
ತೀವ್ರ ರಕ್ತಹೀನತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯ ತಪಾಸಣೆ ವೇಳೆ ಕೊರೊನಾ ದೃಢಪಟ್ಟಿರುವ ಅಂಶ ಬೆಳಕಿಗೆ ಬಂದಿದೆ. ಬಳಿಕ ಆಕೆಯ ಶ್ವಾಸಕೋಶದಿಂದ ತೆಗೆಯಲಾದ ಮಾದರಿಯನ್ನ ಅಧ್ಯಯನ ಮಾಡಿದ್ದ ವೇಳೆ ಆಕೆ ಅಂದಾಜು 70 ದಿನಗಳ ಹಿಂದೆಯೇ ಸೋಂಕಿಗೆ ಒಳಗಾಗಿರುವ ಅಂಶ ತಿಳಿದುಬಂದಿದೆ.
ಆದರೆ ವೃದ್ಧೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರಿಂದ ಕೊರೊನಾ ವೈರಸ್ಗೆ ದಾಳಿ ಮಾಡಲು ಆಗಲಿಲ್ಲ. ಬಳಿಕ ಆಕೆಗೆ ಪ್ಲಾಸ್ಮಾ ಚಿಕಿತ್ಸೆಯನ್ನೂ ಮಾಡಲಾಗಿ ಅದೂ ಕೂಡ ಕೊರೊನಾದ ಮೇಲೆ ಪರಿಣಾಮ ಬೀರಿತು.
ಸೋಂಕಿನ ಅವಧಿಯಲ್ಲಿ ವೈರಸ್ ಯಾವ ರೀತಿಯಲ್ಲಿ ಮಾರ್ಪಾಡಾಗುತ್ತೆ ಎಂಬುದನ್ನ ವಿಜ್ಞಾನಿಗಳು ಪರಿಶೀಲನೆ ಮಾಡಿದ್ದಾರೆ. ವಿವಿಧ ದಿನಗಳಲ್ಲಿ ಸಂಗ್ರಹಿಸಲಾದ ಮಾದರಿಗಳ ಪ್ರಕಾರ ವೈರಸ್ ಪ್ರಬಲ ಜೀನ್ಗಳಾಗಿ ರೂಪಾಂತರಗೊಳ್ಳುತ್ತೆ ಎಂಬ ಅಂಶ ತಿಳಿದು ಬಂದಿದೆ. ಬರೋಬ್ಬರಿ 105 ದಿನಗಳ ಕಾಲ ಸೋಂಕಿಗೆ ಒಳಗಾಗಿದ್ದ ವೃದ್ಧೆ ವಿಶ್ವದ ಅತ್ಯಂತ ದೀರ್ಘಕಾಲದ ಕೊರೊನಾ ಸೋಂಕಿತೆ ಅಂತಾ ಸಂಶೋಧಕರು ಅಂದಾಜಿಸಿದ್ದಾರೆ.