ಕೆಲವೊಂದು ಕೆರೆಗಳಲ್ಲಿ ಬೇಸಿಗೇ ಕಾಲದಲ್ಲೂ ಸಹ ಈಜುವುದು ಸುರಕ್ಷಿತವಲ್ಲ. ಈ ಅನುಭವವನ್ನು ಕೆನಡಾದ ಕಿಮ್ ಖುದ್ದಾಗಿ ಪಡೆದುಕೊಂಡಿದ್ದಾರೆ.
ಇಲ್ಲಿನ ಒಂಟಾರಿಯೋದ ಮಿನಾಕಿ ಹತ್ತಿರ ಇರುವ ವಿನ್ನಿಪೆಗ್ ನದಿಗುಂಟ ಇರುವ ನಾರ್ತ್ ಸ್ಟಾರ್ ಬೀಚ್ ಬಳಿ ಜಲಕ್ರೀಡೆಯಲ್ಲಿ ತೊಡಗಿದ್ದ ಡೈವರ್ ಗೆ ಇದ್ದಕ್ಕಿದ್ದಂತೆ ಮಸ್ಕೆಲುಂಜ್ ಮೀನು ದಾಳಿ ಮಾಡಿದೆ. ಮಸ್ಕೀ ಎಂದು ಕರೆಯಲಾಗುವ ಈ ಮೀನುಗಳು ಬಹಳ ಬೇಗ ಬೆಳೆಯುವ ಕಾರಣದಿಂದ 6 ಅಡಿಯಷ್ಟು ಉದ್ದ ಹಾಗೂ 50 ಪೌಂಡ್‌ಗಳಷ್ಟು ತೂಕ ಹೊಂದುತ್ತವೆ.
ಬಹಳ ಪ್ರಯಾಸದಿಂದ ಈ ದಾಳಿಯಿಂದ ಪಾರಾದ ಕಿಮ್, ನೀರಿನಿಂದ ಸುರಕ್ಷಿತವಾಗಿ ಮೇಲೆದ್ದು ಬಂದಿದ್ದಾರೆ. ಇದೀಗ ಮಸ್ಕಿ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿರುವ ಈ ದಂಪತಿ, ಮುಂದಿನ ದಿನಗಳಲ್ಲಿ ಅದರ ಮೇಲೆ ಪ್ರತಿದಾಳಿ ನಡೆಸಲು ಪ್ಲಾನ್ ಮಾಡುತ್ತಿದ್ದಾರಂತೆ.