ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹೆಚ್-1ಬಿ ವೀಸಾ ಮೇಲೆ ಮತ್ತಷ್ಟು ಹೊಸ ನಿರ್ಬಂಧಗಳನ್ನು ಹೇರಿದೆ. ಇದರಿಂದಾಗಿ ಭಾರತದ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಉಂಟಾಗಲಿದೆ.
ಹೆಚ್-1ಬಿ ವೀಸಾ ನಿಯಮ ಇನ್ನಷ್ಟು ಬಿಗಿಗೊಳಿಸಿರುವ ಟ್ರಂಪ್ ಸರ್ಕಾರದ ನಿರ್ಧಾರದಿಂದ ಭಾರತೀಯರಿಗೆ ತೊಂದರೆಯಾಗುತ್ತದೆ. ವೀಸಾ ಪಡೆಯುವ ಮಾನದಂಡದಲ್ಲಿ ವೇತನ ಮಿತಿ ಹೆಚ್ಚಳ ಮಾಡಿರುವ ಜೊತೆಗೆ ವೀಸಾ ಅವಧಿಯನ್ನು ಕೂಡ ಕಡಿತ ಮಾಡಲಾಗಿದೆ.
ಥರ್ಡ್ ಪಾರ್ಟಿ ಪ್ಲೇಸ್ಮೆಂಟ್ ಗಳ ಸಂಬಂಧ ಹೆಚ್-1ಬಿ ವೀಸಾ ಅವಧಿಯನ್ನು 3 ವರ್ಷದಿಂದ ಒಂದು ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಮೂರನೇ ಒಂದು ಭಾಗದಷ್ಟು ಅರ್ಜಿ ನಿರಾಕರಿಸಲು ಡಿಪಾರ್ಟ್ಮೆಂಟ್ ಆಫ್ ಹೋಂ ಲ್ಯಾಂಡ್ ಸೆಕ್ಯುರಿಟಿಗೆ ಅವಕಾಶ ನೀಡಲಾಗಿದೆ. ಕಡಿಮೆ ಸಂಬಳಕ್ಕೆ ಬರುವ ವಿದೇಶಿ ಉದ್ಯೋಗಿಗಳಿಗೆ ಕಡಿವಾಣ ಹಾಕಲಾಗಿದೆ. ಇದರಿಂದಾಗಿ ಅಮೆರಿಕದ ಗುತ್ತಿಗೆ ನಂಬಿಕೊಂಡಿರುವ ಭಾರತೀಯ ಕಂಪನಿಗಳ ಉದ್ಯೋಗಿಗಳಿಗೆ ತೊಂದರೆಯಾಗಲಿದೆ ಎಂದು ಹೇಳಲಾಗಿದೆ.