ಅಮೆರಿಕಾದಲ್ಲಿ ದಿನದಿಂದ ದಿನಕ್ಕೆ ಕಪ್ಪು-ಬಿಳಿ ವರ್ಣೀಯರ ನಡುವಿನ ಗಲಾಟೆ ಮುಗಿಯವ ಲಕ್ಷಣ ಕಾಣುತ್ತಿಲ್ಲ.
ಅಮೆರಿಕಾದ ಒರೆಗಾನ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ಮಾಸ್ಕ್ ಧಾರಣೆಯಿಂದ ಕಪ್ಪು ವರ್ಣೀಯರ ಮೇಲೆ ಅದರಲ್ಲೂ ಹುಡುಗರ ಮೇಲೆ ಹಲ್ಲೆಯಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಮಾಸ್ಕ್ ಅದರಲ್ಲೂ ಬಣ್ಣದ ಮಾಸ್ಕ್ ಧರಿಸುವುದು ಬೇಡ ಎನ್ನುವ ನಿರ್ಧಾರಕ್ಕೆ ಅಲ್ಲಿನ ಸರಕಾರ ಬಂದಿದೆ.
ಮಾಸ್ಕ್ ಧರಿಸುವುದು ಅಲ್ಲಿನ ರಾಜ್ಯಪಾಲರು ಹೊರಡಿಸಿದ್ದ ಆದೇಶವಾದರೂ, ಜನರ ರಕ್ಷಣೆಗಾಗಿ ಈ ನಿಯಮವನ್ನು ಹಿಂಪಡೆಯಲಾಗಿದೆ. ಪ್ರಮುಖವಾಗಿ ಬಣ್ಣದ ಮಾಸ್ಕ್ ಗಳನ್ನು ಸಿದ್ಧಪಡಿಸಿದ್ದ ಕಪ್ಪು ವರ್ಣೀಯರ ಮೇಲಿನ ಹಲ್ಲೆಯಿಂದ ಈ ನಿರ್ಧಾರ ಅನಿರ್ವಾಯ ಎನ್ನುವ ಮಾತುಗಳು ಇದೀಗ ಕೇಳಿಬಂದಿದೆ