ಈ ವರ್ಷ ಲಸಿಕೆಯೊಂದಿಗೆ ಕೊರೊನಾ ಸೋಂಕು ನಿರ್ಮೂಲನೆ ಮಾಡಲು ಅಮೆರಿಕ ಪಣತೊಟ್ಟಿದೆ. ಮೂರು ಲಸಿಕೆಗಳು ಶೀಘ್ರದಲ್ಲಿ ಉತ್ಪಾದನೆಗೆ ಸಿದ್ಧವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ಲಸಿಕೆ ತಯಾರಿಗೆ ವೇಗ ನೀಡಲಾಗಿದೆ. ಸಮರೋಪಾದಿ ಕಾರ್ಯನಿರ್ವಹಣೆ ಕೈಗೊಂಡು ಲಸಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ವಿಜ್ಞಾನಿಗಳು ಶ್ರಮವಹಿಸಿದ್ದಾರೆ. ಅವರಿಗೆ ಲಸಿಕೆ ಅಭಿವೃದ್ಧಿಪಡಿಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ನಮ್ಮಲ್ಲಿ ಕೊರೋನಾ ತಡೆಗೆ ಮೂರು ಲಸಿಕೆಗಳು ರೆಡಿಯಾಗುತ್ತಿದ್ದು, ಶೀಘ್ರದಲ್ಲೇ ಉತ್ಪಾದನೆಗೆ ಲಭ್ಯವಿವೆ. ಈ ಮೂರು ಲಸಿಕೆಗಳು ಜನಬಳಕೆಗೆ ಶೀಘ್ರವೇ ಲಭ್ಯವಾಗುವಂತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.