ಗುರು-ಶಿಷ್ಯರ ಸಂಬಂಧ ಪವಿತ್ರವಾದದ್ದು. ಆದ್ರೆ ಅಮೆರಿಕಾದ ಟೆಕ್ಸಾಸ್ ನಲ್ಲಿ ಶಿಕ್ಷಕನೊಬ್ಬ ನಾಚಿಕೆಗೇಡಿ ಕೆಲಸ ಮಾಡಿದ್ದಾನೆ. ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಲ್ಲದೆ ಆಕೆ ದೇಹದಿಂದ ರಕ್ತ ತೆಗೆಯಲು ಪ್ರಯತ್ನಿಸಿದ್ದಾನೆ.
ಪೀಡಿತೆ 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶಿಕ್ಷಕ, ವಿದ್ಯಾರ್ಥಿನಿಗೆ ಅಶ್ಲೀಲ ಮೇಲ್ ಕಳುಹಿಸಿದ್ದ. ಶಾಲೆಯಲ್ಲಿ ಆಕೆಯನ್ನು ಕೆಟ್ಟದಾಗಿ ಸ್ಪರ್ಶಿಸುತ್ತಿದ್ದ. ನಂತ್ರ ವಿದ್ಯಾರ್ಥಿನಿಗೆ ಸೆಕ್ಸ್ ಟಾಯ್ಸ್ ನೀಡಿದ್ದನಂತೆ. ಬಾಲಕಿ ಮೇಲೆ ಅತ್ಯಾಚಾರವೆಸಗಿದ ನಂತ್ರ ಚುಚ್ಚುಮದ್ದಿನ ಸಹಾಯದಿಂದ ರಕ್ತ ತೆಗೆಯಲು ನೋಡಿದ್ದನಂತೆ. ಬಾಲಕಿ ರಕ್ತವನ್ನು ಕುಡಿಯುವ ಉದ್ದೇಶದಿಂದ ಶಿಕ್ಷಕ ಹೀಗೆ ಮಾಡಿದ್ದನಂತೆ. ಧೈರ್ಯ ತೆಗೆದುಕೊಂಡ ಬಾಲಕಿ, ವಿಷ್ಯವನ್ನು ಪಾಲಕರಿಗೆ ಹೇಳಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೋರ್ಟ್ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಶಿಕ್ಷಕನಿಗೆ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ನೀಡಿದೆ. ಪಾಲಕರು ಮಕ್ಕಳ ಬಗ್ಗೆ ಗಮನ ನೀಡಬೇಕೆಂದು ಕೋರ್ಟ್ ಹೇಳಿದೆ. ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಬಗ್ಗೆ ತಿಳಿಸಬೇಕೆಂದು ಕೋರ್ಟ್ ಹೇಳಿದೆ. ಸಾಮಾನ್ಯವಾಗಿ ಪೀಡಿತರು ವಿಷ್ಯ ಹೇಳಲು ಭಯಪಡ್ತಾರೆ. ಆದ್ರೆ ಬಾಲಕಿ ವಿಷ್ಯವನ್ನು ಎಲ್ಲರ ಮುಂದೆ ಹೇಳಿ ಒಳ್ಳೆ ಕೆಲಸ ಮಾಡಿದ್ದಾಳೆಂದು ಕೋರ್ಟ್ ಹೇಳಿದೆ.