
ಅಮೆರಿಕದ ನ್ಯೂ ವಿಸ್ಕಾನ್ಸಿನ್ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಜಿಲ್ ಕರೋಫ್‌ಸ್ಕೀ ಅಧಿಕಾರ ಸ್ವೀಕರಿಸಿ ಪ್ರಮಾಣವಚನ ಸ್ವೀಕರಿಸುವ ಮುನ್ನ 100 ಮೈಲಿ ಮ್ಯಾರಾಥಾನ್‌ನಲ್ಲಿ ಓಡಿದ್ದಾರೆ.
ಭಾನುವಾರದಂದು ತಮ್ಮ ರನ್ನಿಂಗ್ ಮುಗಿಸಿದ ಕರೋಫ್‌ಸ್ಕೀ, ಮ್ಯಾರಾಥಾನ್ ಮಾರ್ಗದ ಮಧ್ಯದಲ್ಲೇ 35 ಮೈಲಿ ಮಾರ್ಕರ್ ಬಳಿ ಶನಿವಾರ ಮದ್ಯಾಹ್ನ ಒಂದು ಗಂಟೆಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯ ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ರೆಬೆಕ್ಕಾ ಡಲ್ಲೆಟ್ ಇವರಿಗೆ ಪ್ರಮಾಣವಚನ ಬೋಧನೆ ಮಾಡಿದ್ದಾರೆ.
ಶನಿವಾರ ಸಂಜೆ 6 ಗಂಟೆ ವೇಳಗೆ ಕರೋಫ್‌ಸ್ಕೀ ತಮ್ಮ ಓಟವನ್ನು ಆರಂಭಿಸಿದ್ದಾರೆ. 34 ಗಂಟೆಗಳ ಅವಧಿಯಲ್ಲಿ ತಮ್ಮ ರನ್ನಿಂಗ್ ಮುಗಿಸಿದ್ದಾರೆ ಕರೋಫ್‌ಸ್ಕೀ.