ಈ ಕೋವಿಡ್-19 ಸಾಂಕ್ರಮಿಕವು ತಾನಾಗೇ ಹಬ್ಬಿದ್ದಕ್ಕಿಂತ ಜನರ ಅಜ್ಞಾನ ಹಾಗೂ ನಿರ್ಲಕ್ಷ್ಯದಿಂದ ಹುಲುಸಾಗಿ ಜಗತ್ತಿನೆಲ್ಲೆಡೆ ಪಸರಿಸಿದೆ ಎಂಬ ಮಾತಿನಲ್ಲೂ ಸಾಕಷ್ಟು ತೂಕವಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಎಷ್ಟು ಹೇಳಿದರೂ ಸಹ, ಈ ಮನವಿಗಳನ್ನು ಗಾಳಿಗೆ ತೂರುವ ಮಂದಿ ಎಲ್ಲೆಡೆ ಇದ್ದಾರೆ. ಇದಕ್ಕೆ ಅಮೆರಿಕನ್ನರೇನು ಹೊರತಲ್ಲ.
ಅಲಬಾಮಾದಲ್ಲಿ ವಿದ್ಯಾರ್ಥಿಗಳ ಗುಂಪೊಂದು COVID-19 ಪಾರ್ಟಿ ಇಟ್ಟುಕೊಂಡಿದೆ. ಸೋಂಕು ತಗುಲಿದ ವಿದ್ಯಾರ್ಥಿಗಳನ್ನು ಈ ಪಾರ್ಟಿಗೆ ಕರೆಯಿಸಿ, ಆರೋಗ್ಯವಾಗಿರುವವರಿಗೆ ಸೋಂಕನ್ನು ಹಬ್ಬಿಸಲು ಉತ್ತೇಜನ ನೀಡುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಅದೂ ಅಲ್ಲದೇ, ಒಂದು ಮಡಿಕೆಯಲ್ಲಿ ದುಡ್ಡು ಇಟ್ಟು, ಯಾರು ಮೊದಲು ಕೋವಿಡ್-19 ಸೋಂಕನ್ನು ಅಂಟಿಸಿಕೊಳ್ಳುವರೋ ಅವರಿಗೆ ಆ ಮಡಿಕೆಯಲ್ಲಿರುವ ದುಡ್ಡು ಎಂಬ ಪ್ರಲೋಭನೆಗಳನ್ನೂ ಸಹ ಇಡಲಾಗಿತ್ತು. ಈ ಸುದ್ದಿಯನ್ನು ಓದಿದ ನೆಟ್ಟಿಗರು, ಸೋಂಕಿಗೆ ಔಷಧ ಕಂಡು ಹಿಡಿದರೂ ಜನರ ಮೂರ್ಖತನಕ್ಕೆ ಮದ್ದು ಸಿಗದು ಎಂದು ಬಯ್ದು ಕಾಮೆಂಟ್‌ಗಳನ್ನು ಹಾಕಿದ್ದಾರೆ.