alex Certify ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಗುಡ್​ ನ್ಯೂಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಗುಡ್​ ನ್ಯೂಸ್​..!

ಉದ್ಯೋಗವನ್ನರಿಸಿ ದೇಶಕ್ಕೆ ಬರುವ ವಲಸೆಗಾರರಿಗೆ ಸಂಖ್ಯಾತ್ಮಕ ಮಿತಿಯನ್ನ ತೆಗೆದುಹಾಕುವ ಮಸೂದೆಯನ್ನ ಅಮೆರಿಕ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಮೂಲಕ ಗ್ರೀನ್​ ಕಾರ್ಡ್​ಗಾಗಿ ಕಾಯುತ್ತಿದ್ದ ಅಮೆರಿಕದಲ್ಲಿರುವ ಸಾವಿರಾರು ಮಂದಿ ಭಾರತೀಯ ವೃತ್ತಿಗಾರರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.

ಹೆಚ್​ 1 ಬಿ ವೀಸಾದ ಅಡಿಯಲ್ಲಿ ಅಮೆರಿಕಕ್ಕೆ ಬರುವ ಭಾರತೀಯ ಐಟಿ ವೃತ್ತಿಪರರು ಗ್ರೀನ್​ ಕಾರ್ಡ್​ ಅಥವಾ ಶಾಶ್ವತ ರೆಸಿಡೆನ್ಸಿಗಾಗಿ ದಶಕಗಳಿಂದ ಕಾಯುತ್ತಿದ್ದರು. ಟ್ರಂಪ್​ ಆಡಳಿತಾವಧಿಯಲ್ಲಿ ಹೆಚ್​​ 1 ಬಿ ವೀಸಾಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನ ಸಡಿಲಗೊಳಿಸಿ ಹಸಿರು ಕಾರ್ಡ್​ ನಿಯಮ ಜಾರಿಗೆ ತರಲಾಗಿದೆ.

ಪ್ರಸ್ತುತ ಸುಮಾರು 1 ಮಿಲಿಯನ್​ ವಿದೇಶಿ ಪ್ರಜೆಗಳು ಅಮೆರಿಕದಲ್ಲಿ ಕುಟುಂಬ ಸಮೇತರಾಗಿ ಕಾನೂನುಬದ್ಧವಾಗೇ ವಾಸ ಮಾಡುತ್ತಿದ್ದಾರೆ. ಇದರಲ್ಲಿ ಭಾರತೀಯರ ಸಂಖ್ಯೆಯೇ ಜಾಸ್ತಿ ಇದೆ. ಅಮೆರಿಕದಿಂದ ಗ್ರೀನ್​ ಕಾರ್ಡ್​ ಪಡೆಯಬೇಕೆಂದು ಸುಮಾರು 8 ಲಕ್ಷಕ್ಕೂ ಅಧಿಕ ಮಂದಿ ಭಾರತೀಯರು ಅರ್ಜಿ ಸಲ್ಲಿಸಿದ್ದರು. ಆದರೆ ದಶಕಗಳಿಂದ ಈ ಅರ್ಜಿ ವಿಚಾರಣೆಗೆ ಒಳಪಡದೇ ಹಾಗೆ ಕೊಳೆಯುತ್ತಿತ್ತು.

ವಿದೇಶದಿಂದ ಅಮೆರಿಕಕ್ಕೆ ತೆರಳಿದವರು ಅಲ್ಲಿನ ನಿವಾಸಿ ಎಂದು ಗುರುತಿಸಿಕೊಳ್ಳಬೇಕು ಅಂದರೆ ತಮ್ಮ ಉದ್ಯೋಗದಲ್ಲಿ ಪ್ರಾವೀಣ್ಯತೆಯನ್ನ ಪಡೆದಿರಬೇಕು. ಆಗ ಮಾತ್ರ ಅಮೆರಿಕ ಅಂತಹ ವಿದೇಶಿ ಪ್ರಜೆಗೆ ಔದ್ಯೋಗಿಕ ಗ್ರೀನ್​ ಕಾರ್ಡ್​ ನೀಡಿ ತನ್ನ ದೇಶದ ಶಾಶ್ವತ ಪ್ರಜೆಯ ಸ್ಥಾನ ನೀಡುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...