
2020 ನಮ್ಮಲ್ಲಿ ಬಹಳಷ್ಟು ಜನರಿಗೆ ಭಾರೀ ಸಂಕಷ್ಟ ತಂದಿಟ್ಟಿರುವ ವರ್ಷವಾಗಿದೆ. ಇದೇ ವೇಳೆ, ಧೈರ್ಯ ಹಾಗೂ ಭರವಸೆಯ ಕ್ಷಣಗಳು ಸಕಾರಾತ್ಮಕ ಭಾವ ಮೂಡಿಸುತ್ತವೆ.
ಅಮೆರಿಕದ ನಾವಿಕರೊಬ್ಬರು ಸಾಗುತ್ತಿದ್ದ ದೋಣಿಯೊಂದು ಮಗುಚಿ ಬಿದ್ದಿದ್ದು, ಅದು 24 ಗಂಟೆಗಳ ಕಾಲ ಮಿಸ್ಸಿಂಗ್ ಆಗಿತ್ತು. 62 ವರ್ಷದ ಸ್ಟುವರ್ಟ್ ಬೀ, ಫ್ಲಾರಿಡಾದ ಪೋರ್ಟ್ ಕನವೆರಾಲ್ ಪ್ರದೇಶದಿಂದ, ನಾಪತ್ತೆಯಾಗಿದ್ದರು.
ನವೆಂಬರ್ 29ರಂದು ಅವರ ದೋಣಿಯ ಬಳಿ ಸಾಗಿ ಹೋಗುತ್ತಿದ್ದ ಕಂಟೇನರ್ ಹಡಗೊಂದು ಸ್ಟುವರ್ಟ್‌ರನ್ನು ಕಂಡು ಅವರನ್ನು ರಕ್ಷಿಸಿ ಕರೆದುಕೊಂಡಿದೆ.
ಈ ವಿಚಾರವನ್ನು @USCGSoutheast ಹೆಸರಿನ ಟ್ವಿಟರ್ ಹ್ಯಾಂಡಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
https://twitter.com/Lacruiser_Tives/status/1333233231081185283?ref_src=twsrc%5Etfw%7Ctwcamp%5Etweetembed%7Ctwterm%5E1333233231081185283%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fus-sailor-reported-missing-rescued-from-capsized-boat-after-over-24-hours-3131030.html