alex Certify ಬಿಡೆನ್ ಗೆಲುವು ಘೋಷಣೆಯಾಗುವ ಹೊತ್ತಿಗೆ ಗಾಲ್ಫ್ ಆಡುತ್ತಿದ್ದ ಟ್ರಂಪ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡೆನ್ ಗೆಲುವು ಘೋಷಣೆಯಾಗುವ ಹೊತ್ತಿಗೆ ಗಾಲ್ಫ್ ಆಡುತ್ತಿದ್ದ ಟ್ರಂಪ್…!

ವಾಷಿಂಗ್ಟನ್: ನಾಲ್ಕು ದಿನಗಳ ಅನಿಶ್ಚಿತತೆಯ ಬಳಿಕ ಅಮೆರಿಕಾದ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆಯನ್ನು ಅಧಿಕೃತವಾಗಿ ಶನಿವಾರ ಘೋಷಿಸಲಾಗಿದೆ. ಬಿಡನ್ ಅವರು ವೈಟ್ ಹೌಸ್ ರೇಸ್ ಗೆದ್ದು ಅಮೆರಿಕಾ ಸಂಯುಕ್ತ ಸಂಸ್ಥಾನದ 46 ನೇ ಅಧ್ಯಕ್ಷರಾಗಲು ತಯಾರಿ ನಡೆಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಆಯ್ಕೆಯಾಗಿದ್ದು, ಆ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯಳು ಹಾಗೂ ಮೊದಲ ಏಷ್ಯಾ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ.

ಡೆಮಾಕ್ರೆಟಿಕ್ ಪಕ್ಷವು 264 ಎಲೆಕ್ಟೊರಲ್ ವೋಟ್ ಪಡೆದಿತ್ತು. ಸಾಮಾನ್ಯ ಬಹುಮತಕ್ಕೆ ಆರು ಮತಗಳು ಮಾತ್ರ ಸಾಕಾಗಿದ್ದವು. ಕೊನೆಗೆ ನಡೆದ ಪೆನ್ಸಲ್ವೇನಿಯಾ ರಾಜ್ಯ ಮತ ಎಣಿಕೆಯ ಬಳಿಕ ಪಕ್ಷವು ಒಟ್ಟು 290 ಮತ ಪಡೆದು ಸಂಪೂರ್ಣ ಬಹುಮತದ ಅಧಿಕಾರ ಹಿಡಿದಿದೆ. ಆದರೆ, ಅಧ್ಯಕ್ಷೀಯ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡ ಸಮಯದಲ್ಲಿ ಸೋಲು ಕಂಡ ಡೊನಾಲ್ಡ್ ಟ್ರಂಪ್ ಏನು ಮಾಡುತ್ತಿದ್ದರು ಎಂಬುದೇ ಎಲ್ಲರ ಅಚ್ಚರಿ.

ಅಮೆರಿಕಾದ ಫೋಟೋಗ್ರಾಫರ್‌ಗಳು ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನೂ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ವರ್ಜೀನಿಯಾದ ತಮ್ಮ ಗಾಲ್ಫ್ ಕೋರ್ಸ್‌ನಲ್ಲಿ ಗಾಲ್ಫ್ ಆಡುತ್ತಿದ್ದರು ಎನ್ನಲಾಗಿದೆ. ಟ್ರಂಪ್ ಗಾಲ್ಫ್ ಆಟಗಾರರಾಗಿದ್ದು, ಕೆಲ ವರ್ಷಗಳಿಂದ ಅದನ್ನು ನಿಲ್ಲಿಸಿದ್ದರು.

‘ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ರಾಜ್ಯದಲ್ಲೂ ಬಿಡೆನ್ ಸಂಪೂರ್ಣವಾಗಿ ಗೆಲುವು ಸಾಧಿಸಿಲ್ಲ. ಅವರಿಗೆ ಅತಿ ಹೆಚ್ಚು ಮತ ಪಡೆದ ರಾಜ್ಯಗಳಲ್ಲಿ ಮರು ಎಣಿಕೆಯ ಅವಶ್ಯಕತೆ ಇದೆ. ಮಾಧ್ಯಮಗಳು ಬಿಡೆನ್ ಅವರು ಗೆದ್ದಿದ್ದಾರೆ ಎಂದು ಸುಳ್ಳು ಹೇಳಿ, ಅವರ ಬೆಂಬಲಕ್ಕೆ ನಿಲ್ಲುತ್ತಿವೆ’ ಎಂದು ಟ್ರಂಪ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...