ಅಮೆರಿಕ ಸಂಯುಕ್ತ ಸಂಸ್ಥಾನದ ಮಿಸಿಸಿಪ್ಪಿ ರಾಜ್ಯ ಹೊಸ ಧ್ವಜ ವಿನ್ಯಾಸ ಮಾಡಲು ಮುಂದಾಗಿದೆ. ಅದರಲ್ಲಿ ದೊಡ್ಡ ಸೊಳ್ಳೆಯ ಚಿತ್ರ ಹಾಕುವಂತೆ ಅಲ್ಲಿಯ ಪ್ರಜೆಯೊಬ್ಬ ಸಲಹೆ ನೀಡಿದ್ದಾನೆ.
ಆತನ ಪ್ರಸ್ತಾಪ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೋಜಿನ ವಿಷಯವಾಗಿ ಚರ್ಚೆಯಲ್ಲಿದೆ. ಯಾಜೂ ನದಿಯ ಪಕ್ಕದ ಕಾರ್ಮಿಕ ಥೋಮಸ್ ರೊಸ್ಟೆ ಎಂಬಾತ “ಸೊಳ್ಳೆಗಳು ಇಲ್ಲಿನ ಎಲ್ಲೆಡೆ ಇದ್ದು, ಭಯ ಹುಟ್ಟಿಸುತ್ತವೆ. ಇದರಿಂದ ನಕ್ಷತ್ರಗಳಿಂದ ಸುತ್ತುವರಿದ ಸೊಳ್ಳೆಯ ಚಿತ್ರವಿರುವ ಧ್ವಜ ರಚಿಸಿʼʼ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದಾನೆ.
ಹಾಲಿ ಧ್ವಜದ ಬಗ್ಗೆ ಹಲವು ಜನಾಂಗೀಯವಾದದ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಮಿಸಿಸಿಪ್ಪಿ ರಾಜ್ಯ ಧ್ವಜದ ವಿನ್ಯಾಸವನ್ನು ಬದಲು ಮಾಡಲು ಕಾನೂನು ನಿರ್ಮಾತೃಗಳು ಮುಂದಾಗಿದ್ದಾರೆ. ಅದಕ್ಕಾಗಿ 9 ತಜ್ಞರ ಸಮಿತಿ ರಚಿಸಲಾಗಿದ್ದು, ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ.