alex Certify ವಿಶಿಷ್ಟ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ರೀತಿಯಲ್ಲಿ ಪ್ರೇಮ ನಿವೇದನೆ ಮಾಡಿದ ಯುವಕ

ತಮ್ಮ ಬಾಳ ಸಂಗಾತಿಯನ್ನು ಆಯ್ದುಕೊಳ್ಳುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಅದು ಅವಿಸ್ಮರಣೀಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಾಗೆ ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರೀತಿಯನ್ನು ಹೇಳಿಕೊಂಡ ಹಲವರು ಇದುವರೆಗೂ ಸುದ್ದಿಯಾಗಿದ್ದಾರೆ.

ಈಗ ಅಮೆರಿಕಾದಲ್ಲಿ ಒಂದು ಜೋಡಿ ವಿಶಿಷ್ಟ ರೀತಿಯಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡು ಸುದ್ದಿಯಾಗಿದೆ.‌

ಇಡಾಹೋದ ಬ್ಲೇಜ್ ಮೊಂಟ್ಗೊಮೆರಿ ತನ್ನ ಪ್ರಿಯತಮೆ ಡೆನಿಸ್ ಅಮೌಜೊಗೇನ್ ಅವರಲ್ಲಿ ಕಾಲ್ಪನಿಕ ಸಿನಿಮೀಯ ವಿಶಿಷ್ಟ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ. ಆಕೆಯ ಕುಟುಂಬದ ಸದಸ್ಯರೂ ಈ ಸಂದರ್ಭಕ್ಕೆ ಸಾಕ್ಷಿಯಾಗಿ ಅಚ್ಚರಿ ವ್ಯಕ್ತಪಡಿಸಿದರು.

ಬ್ಲೇಜ್ ಪ್ರಿನ್ಸಸ್ ಟೈನಾ ಅವರ ಪೋಷಾಕು ಧರಿಸಿ ಸಾರ್ವಜನಿಕ ಸ್ಥಳದಲ್ಲಿ ಬಂದು ಮಂಡಿಯೂರಿ ಕುಳಿತು ಗುಲಾಬಿ ಹೂವು ನೀಡಿ ಮದುವೆಯ ಪ್ರಸ್ತಾಪ ಮಾಡಿದರು. ಬ್ಲೇಜ್ ಅವರ ಸ್ನೇಹಿತೆ ಸೆಲಿನಾ ಎಂಬುವವರು ಈ ವಿಶಿಷ್ಟ ಎಂಗೇಜ್ ಮೆಂಟ್ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಈ ಪ್ರಹಸನ ಸಾಕಷ್ಟು ವೈರಲ್ ಆಗಿದೆ.

https://www.facebook.com/celina.muli/posts/3636843376346236

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...