ಮಕ್ಕಳು ಕೇಳುವ ಹಾಡೊಂದನ್ನು ಭಾರೀ ವಾಲ್ಯೂಮ್ ನಲ್ಲಿ ಖೈದಿಗಳಿಗೆ ಪದೇ ಪದೇ ಕೇಳಿಸಿ ಮಾನಸಿಕ ಹಿಂಸೆ ನೀಡಿದ ಆಪಾದನೆ ಮೇಲೆ ಒಕ್ಲಾಹೋಮಾ ಕೌಂಟಿಯ ಜೈಲು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ.
ಒಕ್ಲಾಹಾಮಾ ಕೌಂಟಿಯ ಜೈಲು ಕೇಂದ್ರದ ನಾಲ್ವರು ಖೈದಿಗಳಿಗೆ ಕೈಕಟ್ಟಿ, ’ಬೇಬಿ ಶಾರ್ಕ್’ ಹೆಸರಿನ ಈ ಹಾಡನ್ನು ಖೈದಿಗಳಿಗೆ ಪದೇ ಪದೇ ಕೇಳಿಸಿದ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಈ ಘಟನೆಗಳು ಕಳೆದ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ನಡೆದಿದೆ.
ಜೈಲಾಧಿಕಾರಿಗಳಾದ ಕ್ರಿಶ್ಚಿಯನ್ ಮೈಲ್ಸ್, ಗ್ರಗರಿ ಬಟ್ಲರ್, ಕ್ರಿಸ್ಟೋಫರ್ ಹೆಂಡರ್‌ಶಟ್‌ರಿಗೆ ಖೈದಿಗಳಿಗೆ ಚಿತ್ರ ಹಿಂಸೆ ಕೊಡಲಾದ ಆಪಾದನೆ ಮೇಲೆ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ.
ಈ ರೀತಿ ಮಕ್ಕಳ ಹಾಡುಗಳನ್ನು ದೊಡ್ಡ ವಾಲ್ಯೂಮ್‌ನಲ್ಲಿ ಕೇಳಿಸುವ ಮೂಲಕ ಖೈದಿಗಳಿಗೆ ನಿದ್ರೆ ಮಾಡದಂತೆ ಮಾಡಿ, ಚಿತ್ರ ಹಿಂಸೆ ಕೊಡುವ ಪರಿಪಾಠವನ್ನು ಸಿಐಎ ಇಟ್ಟುಕೊಂಡಿದೆ ಎಂಬ ಆಪಾದನೆಗಳು ಬಹಳ ಇವೆ.