ಅಮೆರಿಕದಲ್ಲಿ ಕಪ್ಪು ವರ್ಣೀಯನ ಮೇಲಾದ ದಾಳಿಯಿಂದ ಮತ್ತೊಮ್ಮೆ ವರ್ಣ ದ್ವೇಷದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಇದೀಗ ಅಮೆರಿಕ ಮೂಲದ ಐಸ್ ಕ್ರೀಂ ಸಂಸ್ಥೆ ತನ್ನ ಹೆಸರು ಬದಲಾಯಿಸಲು ಮುಂದಾಗಿದೆ.
ಹೌದು, 99 ವರ್ಷ ಹಿನ್ನೆಲೆಯಿರುವ ಎಸ್ಕಿಮೋ ಪೈ ಹೆಸರನ್ನು ಡೆರಿಗಾಟರಿ ಎಂದು ಹೆಸರಿಡಲು ತೀರ್ಮಾನಿಸಿದೆ ಎಂದು ಸಂಸ್ಥೆ ತಿಳಿಸಿದೆ.
ಡ್ರೆಯರ್ ಗ್ರ್ಯಾಂಡ್ ಎನ್ನುವ ಸಂಸ್ಥೆ ಕಳೆದ 99 ವರ್ಷದಿಂದ ಎಸ್ಕಿಮೋ ಪೈ ಎನ್ನುವ ಹೆಸರಲ್ಲಿ ಚಾಕೋ ಬಾರ್ ಐಸ್ ಕ್ರೀಂ ತಯಾರಿಸುತ್ತಿತ್ತು.
ಆದರೀಗ ಡೆರಿಗಾಟರಿ ಎನ್ನುವ ಹೆಸರಲ್ಲಿ ಈ ಚಾಕೋ ಬಾರ್ ಉತ್ಪಾದಿಸಲು ನಿರ್ಧರಿಸಿದೆ. ಈ ಬಗ್ಗೆ ಎಲಿಜಬೆಲ್ ಮಾರ್‌ಕ್ವೀಜ್ ಮಾತನಾಡಿದ್ದು, ವರ್ಣ ಭೇದವನ್ನು ತೆಗೆದು, ಸಮಾನತೆ ಹೊಂದುವ ಉದ್ದೇಶದೊಂದಿಗೆ ಈ ರೀತಿ ಮಾಡಲಾಗಿದೆ ಎಂದಿದ್ದಾರೆ. ಇದು ಗ್ರಾಹಕರ ಬಹುದೊಡ್ಡ ಜನರ ಮನಸ್ಥಿತಿಗೆ ಸರಿಹೊಂದಲಿದೆ ಎಂದಿದ್ದಾರೆ.
ಇನ್ನು ಇದೇ ರೀತಿ ಹಲವು ಸಂಸ್ಥೆಗಳು ಉತ್ಪನ್ನಗಳ ಹೆಸರನ್ನು ಬದಲಾಯಿಸಿವೆ.