ಕೊರೊನಾ ಸೋಂಕಿಗೆ ಲಸಿಕೆ ದೊಡ್ಡ ಅಸ್ತ್ರವಾಗಿದೆ. ವಿಶ್ವದಾದ್ಯಂತ ಎಲ್ಲ ದೇಶಗಳ ಸರ್ಕಾರಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡ್ತಿವೆ. ಅಮೆರಿಕಾದ ಓಹಿಯೋ ಜನರಿಗೆ ಅಲ್ಲಿನ ಗವರ್ನರ್ ಮೈಕ್ ಡಿವೈನ್ ಒಳ್ಳೆ ಆಫರ್ ನೀಡಿದ್ದಾರೆ.
ಮೈಕ್ ಡಿವೈನ್ ಯೋಜನೆಯ ಪ್ರಕಾರ, ಕೊರೊನಾ ಲಸಿಕೆ ತೆಗೆದುಕೊಳ್ಳುವ ವಯಸ್ಕರಿಗೆ 7.35 ಕೋಟಿ ಮೌಲ್ಯದ ಲಾಟರಿ ಶುರು ಮಾಡಿದ್ದಾರೆ. ಲಸಿಕೆ ಪಡೆದ ವಯಸ್ಕರು ಈ ಲಾಟರಿ ಜಾಕ್ ಪಾಟ್ ನಲ್ಲಿ ಪಾಲ್ಗೊಳ್ಳಬಹುದು. ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡ ವಯಸ್ಕರಿಗೆ ಮೇ 26 ರಿಂದ ಲಾಟರಿ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಲಾಟರಿಯನ್ನು ಪ್ರತಿ ಬುಧವಾರ ಡ್ರಾ ಮಾಡಲಾಗುವುದು. ಮುಂದಿನ 5 ವಾರಗಳವರೆಗೆ ಈ ಲಾಟರಿ ನಡೆಯಲಿದೆ ಎಂದು ಮೈಕ್ ಡಿವೈನ್ ಹೇಳಿದ್ದಾರೆ.
ಓಹಿಯೋದ ನಾಗರಿಕರಿಗೆ ಮಾತ್ರ ಲಾಟರಿಯಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. 18 ವರ್ಷ ಮೇಲ್ಪಟ್ಟವರು ಲಾಟರಿಯಲ್ಲಿ ಪಾಲ್ಗೊಳ್ಳಬಹುದು. ಲಾಟರಿ ಪಡೆಯುವ ಮೊದಲು ಲಸಿಕೆ ಹಾಕಿಸಿಕೊಂಡಿರಬೇಕೆಂದು ಅವರು ಹೇಳಿದ್ದಾರೆ.