ಕೊರೊನಾ ವೈರಸ್ನಿಂದಾಗಿ ವಿಶ್ವದಲ್ಲಿ ಅನೇಕರ ಜೀವನ ಅಸ್ತವ್ಯಸ್ತವಾಗಿದೆ. ಮನೆಯಿಂದ ಹೊರಬರಬೇಕು ಅಂದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಇದು ಸಾಲದು ಅಂತಾ ಪದೇ ಪದೇ ತಮ್ಮ ಕೈಯನ್ನ ಸ್ಯಾನಿಟೈಸ್ ಬೇರೆ ಮಾಡಿಕೊಳ್ಳಬೇಕು. ಆದರೆ ಅಮೆರಿಕದಲ್ಲಿ ಮಾತ್ರ ಕೊರೊನಾ ವೈರಸ್ ತಡೆಯಲು ಮಾಸ್ಕ್ ಹಾಕಿಕೊಳ್ಳುವ ಪ್ಲಾನ್ಗೆ ವಿರೋಧ ವ್ಯಕ್ತಪಡಿಸುವವರು ಇನ್ನೂ ಇದ್ದಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.
ಅಮೆರಿಕ ಹೋಟೆಲ್ ಒಂದರ ಮುಂದೆ ಫೇಸ್ ಡೈಪರ್ ಬಳಸಬೇಕು ಎಂಬ ಅವಶ್ಯಕತೆ ಇಲ್ಲ. ಪ್ರತಿಯೊಬ್ಬರಿಗೂ ಸ್ವಾಗತ ಎಂದು ಬರೆಯಲಾಗಿದೆ. ಬೆಕಿಜಾಕ್ ಎಂಬಲ್ಲಿ ಫುಡ್ ಶಾಪ್ನ ಪ್ರವೇಶ ದ್ವಾರದ ಎದುರು ಈ ರೀತಿಯ ಬೋರ್ಡ್ ಒಂದನ್ನ ಹಾಕಲಾಗಿದೆ. ಫೇಸ್ಬುಕ್ನಲ್ಲಿ ಶೇರ್ ಮಾಡಲಾದ ಈ ಫೋಟೋದ ಬಗ್ಗೆ ಕಮೆಂಟ್ ಸೆಕ್ಷನ್ನಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ.