ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ ಎಂಬುದು ಹಳೆಯ ಮಾತು. ಇಂದಿನ ಡಿಜಿಟಲ್ ಯುಗದಲ್ಲಿ ಮದುವೆಗಳು ವಿಡಿಯೋ ಕಾನ್ಫರೆನ್ಸ್ ಕರೆಯ ಮೂಲಕವೂ ಆಗಿಬಿಡುತ್ತವೆ.
ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ನವಜೋಡಿಯೊಂದು ಎನ್‌ಎಫ್‌ಟಿ ಟೋಕನ್‌ಗಳನ್ನೇ ತಮ್ಮ ಸ್ಮಾರ್ಟ್‌ಫೋನ್‌ಗಳ ಮೂಲಕ ವರ್ಚುವಲ್ ಉಂಗುರಗಳ ಟೋಕನ್‌ಗಳನ್ನಾಗಿ ಬದಲಿಸಿಕೊಂಡು ಮದುವೆ ಮಾಡಿಕೊಂಡಿದ್ದಾರೆ. ಇಬ್ಬರೂ ಕ್ರಿಪ್ಟೋಕರೆನ್ಸಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಾರೆ.
ಡಿಜಿಟಲ್ ಐಟಂಗಳನ್ನು ಬ್ಲಾಕ್‌ಚೇನ್ ಮೂಲಕ ಯಾರು ತಮ್ಮಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಟ್ರ‍್ಯಾಕ್ ಮಾಡಲು ಹಾಗೂ ಈ ವಸ್ತುಗಳ ಮಾರಾಟ/ಖರೀದಿಯ ವ್ಯವಹಾರಗಳನ್ನು ನಡೆಸಲೆಂದೇ ಎನ್‌ಎಫ್‌ಟಿ ವ್ಯವಸ್ಥೆ ತರಲಾಗಿದೆ.
ಲಾಡ್ಜ್ ನಲ್ಲೇ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ಅರೆಸ್ಟ್: ಇಬ್ಬರು ಮಹಿಳೆಯರ ರಕ್ಷಣೆ
ರೆಬೆಕ್ಕಾ ರೋಸ್ ಹಾಗೂ ಪೀಟರ್ ಕಚೆರ್‌ಗಿಂಗ್‌ಸ್ಕೀ ಸಾಂಪ್ರದಾಯಿಕ ಜೀವಿಶ್ ಸಮಾರಂಭವೊಂದರಲ್ಲಿ ಅಮೆರಿಕದಲ್ಲಿ ಕಳೆದ ತಿಂಗಳು ವಿವಾಹವಾಗಿದ್ದಾರೆ. ಈ ವೇಳೆ, ’ತಬಾತ್’ (ಹಿಬ್ರೂನಲ್ಲಿ ಉಂಗುರ) ಟೋಕನ್‌ಗಳನ್ನು ಬದಲಿಸಿಕೊಂಡು ಇಬ್ಬರೂ ವಿವಾಹವಾಗಿದ್ದಾರೆ.
“ಬಹಳ ಮಂದಿ ಪೂಜಾ ಕೇಂದ್ರಗಳು, ಬೀಚ್‌ಗಳು ಅಥವಾ ಪರ್ವತಗಳ ಮೇಲೆ ಮದುವೆಯಾಗುತ್ತಾರೆ. ಆದರೆ ನಾವು ಎಲ್ಲರಂತಲ್ಲ. ನಾವು ಬ್ಲಾಕ್‌ಚೇನ್ ಮೂಲಕ ಮದುವೆಯಾಗಿದ್ದೇವೆ” ಎಂದು ರೋಸ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.