ಕೋವಿಡ್ -19 ದೆಸೆಯಿಂದಾಗಿ ಎಲ್ಲೆಡೆ ಲಾಕ್ ಡೌನ್, ಮನೆಯಲ್ಲೇ ಇರುವುದು ಸಾಮಾನ್ಯವಾಗಿದ್ದು, ಮನೆ ಬಿಟ್ಟು ಹೊರಹೋಗಬೇಕಿದ್ದರೆ ಮಾಸ್ಕ್ ಧಾರಣೆ, ಅಂತರ ಕಾಯ್ದುಕೊಳ್ಳುವಿಕೆ ಎಲ್ಲವೂ ಕಡ್ಡಾಯವಾಗಿದೆ.
ಇಷ್ಟಾದರೂ ಕ್ಯಾಲಿಫೋರ್ನಿಯಾದ ಕಾಫಿ ಮಳಿಗೆಗೆ ಮಾಸ್ಕ್ ಧರಿಸದೆ ಬಂದಿದ್ದಾಳೆ. ಕಾಫಿ ಆರ್ಡರ್ ಮಾಡಿದ್ದಾಳೆ. ಆದರೆ, ಕಾಫಿ ಕೊಡಲು ನಿರಾಕರಿಸಿದ ಮಳಿಗೆಯಾತ, ಮಾಸ್ಕ್ ಧರಿಸದೇ ಇರುವುದರಿಂದ ಕಾಫಿ ಕೊಡಲಾಗುವುದಿಲ್ಲ ಎಂದು ಹೇಳಿ ಮಳಿಗೆಯಿಂದ ಹೊರಗೆ ಕಳುಹಿಸಿದ್ದಾನೆ.
ಇದರಿಂದ ಅವಮಾನಿತಳಾದ ಆ್ಯಂಬರ್ ಲಿನ್ ಗಿಲ್ಸ್ ಎಂಬಾಕೆ, ಸಿಟ್ಟಿನಲ್ಲಿ ಕಾಫಿ ಮಳಿಗೆ ಹಾಗೂ ಕಾಫಿ ಕೊಡಲು ನಿರಾಕರಿಸಿದ ಲೆನಿನ್ ನ ಫೋಟೋ ಕ್ಲಿಕ್ಕಿಸಿಕೊಂಡಿದ್ದಾಳೆ. ಅದನ್ನು ತಕ್ಷಣವೇ ಫೇಸ್ ಬುಕ್ ನಲ್ಲಿ ಹಾಕಿ, ಲೆನಿನ್ ಮಾಡಿದ ತಪ್ಪುಗಳನ್ನು ಜಾಲಾಡಿದ್ದೂ ಅಲ್ಲದೆ, ತನ್ನ ಗೋಳು ತೋಡಿಕೊಂಡಿದ್ದಾಳೆ.
ಆದರೆ, ನೆಟ್ಟಿಗರು ಲಿನ್ ಗಿಲ್ಸ್ ಳನ್ನೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮಾಸ್ಕ್ ಧರಿಸದೆ ಹೋಗಿದ್ದು ತಪ್ಪು ಎಂದಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ವ್ಯಾಪಾರ ಅಥವಾ ಗಿರಾಕಿ ಕಳೆದುಕೊಂಡರೂ ಪರವಾಗಿಲ್ಲ, ಆರೋಗ್ಯ ಮುಖ್ಯ ಎಂಬ ಕಾಫಿ ಮಳಿಗೆಯಾತನ ಕಾರ್ಯಕ್ಕೆ ಮೆಚ್ಚುಗೆ ಸಿಕ್ಕಿದೆ. ಎಲ್ಲಕ್ಕಿಂತ ಮಿಗಿಲಾಗಿ ಇದನ್ನು ಕಂಡ ಮ್ಯಾಟ್ ಗೋವಾನ್ ಎಂಬಾತ ಲೆನಿನ್ ಶ್ಲಾಘನೀಯ ಕಾರ್ಯ ಹಾಗೂ ಗಿಲ್ಸ್ ಳಿಗೆ ಪಾಠ ಕಲಿಸುವ ಸಲುವಾಗಿ ಆನ್ಲೈನ್ ನಲ್ಲೇ ದೇಣಿಗೆ ಸಂಗ್ರಹಿಸಿದ್ದು, 32 ಸಾವಿರ ಡಾಲರ್ ಸಂಗ್ರಹಣೆಯಾಗಿದೆ. ಅಷ್ಟನ್ನೂ ಲೆನಿನ್ ಗೆ ಕಳುಹಿಸಿಕೊಟ್ಟಿದ್ದಾನೆ.
https://www.facebook.com/permalink.php?story_fbid=10157012081506949&id=601056948