
ಇದು ಮಾತ್ರವಲ್ಲದೇ ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಹಾಗೂ ಮೊರಾಕೊ ಸೇರಿದಂತೆ ಹಲವಾರು ದೇಶಗಳಿಗೆ ವಾಣಿಜ್ಯ ಸರಬರಾಜಿನ ಮೂಲಕ ಲಸಿಕೆಗಳನ್ನ ಕಳುಹಿಸಿಕೊಡಲು ಸಿದ್ಧತೆ ನಡೆಸುತ್ತಿದೆ. ಜಾಗತಿಕ ಸಮುದಾಯಕ್ಕೆ ಕೊರೊನಾ ಲಸಿಕೆಗಳನ್ನ ಪೂರೈಸಿರುವ ಭಾರತವನ್ನ ನಿಜವಾದ ಸ್ನೇಹಿತ ಎಂದಿರುವ ಅಮೆರಿಕ, ಭಾರತವನ್ನ ಶ್ಲಾಘಿಸಿದೆ.
ಜಾಗತಿಕ ಆರೋಗ್ಯವನ್ನ ಕಾಪಾಡುವ ನಿಟ್ಟಿನಲ್ಲಿ ಭಾರತದ ಪಾತ್ರವನ್ನ ನಾವು ಶ್ಲಾಘಿಸುತ್ತೇವೆ. ದಕ್ಷಿಣ ಏಷ್ಯಾದಲ್ಲಿ ವಿವಿಧ ದೇಶಗಳು ಕೊರೊನಾ ಲಸಿಕೆಗಳನ್ನ ಹಂಚಿಕೊಳ್ಳುತ್ತಿವೆ. ಭಾರತದ ಉಚಿತ ಲಸಿಕೆ ಮಾಲ್ಡೀವ್ಸ್, ಭೂತಾನ್, ಬಾಂಗ್ಲಾ ಹಾಗೂ ನೇಪಾಳಕ್ಕೆ ಮೊದಲು ನೀಡಲಾಯ್ತು. ಹಾಗೂ ಇತರೆ ದೇಶಗಳಿಗೂ ಭಾರತ ಕೊರೊನಾ ಲಸಿಕೆಗಳನ್ನ ಉಡುಗೊರೆಯಾಗಿ ನೀಡುತ್ತಿದೆ. ಜಾಗತಿಕ ಸಮುದಾಯಕ್ಕೆ ಸಹಾಯ ಮಾಡಲು ತನ್ನ ಔಷಧಾಲಯಗಳನ್ನ ಬಳಸಿಕೊಳ್ಳುತ್ತಿರುವ ಭಾರತ ನಿಜವಾದ ಸ್ನೇಹಿತ ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ಬ್ಯುರೋದ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಟ್ವೀಟ್ ಮಾಡಿದೆ.