ಇಸ್ಲಾಮಾಬಾದ್ ನಲ್ಲಿರುವ ಪಾಕಿಸ್ತಾನದ ಅಧ್ಯಕ್ಷರ ಭವನದಲ್ಲಿ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ಅಮೆರಿಕದ ಚಿತ್ರ ನಿರ್ಮಾಪಕಿ, ಬ್ಲಾಗರ್, ಸಾಹಸಿ ಮಹಿಳೆಯ ಸಿಂಥಿಯಾ ಡಿ. ರಿಚಿ ಮೇಲೆ ಮಾಜಿ ಗೃಹ ಸಚಿವ ರೆಹಮಾನ್ ಮಲಿಕ್ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ.
ಪಿಪಿಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಆಗಿನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಹಲ್ಲೆ ನಡೆಸಿದ್ದಾಗಿ ಸಿಂಥಿಯಾ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಲೈವ್ ಗೆ ಬಂದಿದ್ದ ಸಿಂಥಿಯಾ 2011 ರಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧಿಕಾರದಲ್ಲಿತ್ತು. ಆಗ ಗೃಹ ಸಚಿವರಾಗಿದ್ದ ರೆಹಮಾನ್ ಮಲಿಕ್ ಇಸ್ಲಾಮಬಾದ್ ನಲ್ಲಿರುವ ಅಧ್ಯಕ್ಷರ ಭವನದಲ್ಲಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು. ಪಿಪಿಪಿ ಪಕ್ಷದ ಪ್ರಮುಖ ನಾಯಕರು ಕೂಡ ತಮ್ಮ ಕಾಮತೃಷೆ ತೀರಿಸಿಕೊಳ್ಳಲು ನನ್ನನ್ನು ಬಳಸಿಕೊಂಡಿದ್ದರು ಎಂದು ಸಿಂಥಿಯಾ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವವರ ಬಣ್ಣ ಬಯಲು ಮಾಡಿದ ಕಾರಣ ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಲಾಗುತ್ತಿದೆ. ಇಮೇಲ್ ಹ್ಯಾಕ್ ಮಾಡಲಾಗಿದೆ ಎಂದು ದೂರಿದ್ದಾರೆ. ಅತ್ಯಾಚಾರದ ನಂತರ ಅಂದಿನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ಆರೋಗ್ಯ ಸಚಿವ ಎಂ. ಶಹಾಬುದ್ದೀನ್ ತಮ್ಮ ಮೇಲೆ ಹಲ್ಲೆ ಮಾಡಿದ್ದರು. ಇವೆಲ್ಲ ಘಟನೆಗಳಿಗೆ ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ್ದಾರೆ.