ಸಮುದ್ರದಲ್ಲಿ ವಾಯು ವಿಹಾರ ಮಾಡುವವರು ನೀವಾಗಿದ್ರೆ ನಿಮಗೆ ಅನೇಕ ಬಾರಿ ಸಮುದ್ರದ ದಡದಲ್ಲಿ ಕಪ್ಪೆ ಚಿಪ್ಪುಗಳು ಸಿಕ್ಕಿರಲೂಬಹುದು. ಆದರೆ ಓಹಿಯೋದಲ್ಲಿ ಸಮುದ್ರ ತೀರದಲ್ಲಿ ಅಲೆದಾಡುತ್ತಿದ್ದ ಮಹಿಳೆಗೆ ಸಿಕ್ಕ ಆ ಅಪರೂಪದ ವಸ್ತು ಇದೀಗ ಟಾಕ್ ಆಫ್ ದ ಟೌನ್ ಆಗಿ ಹೋಗಿದೆ.
ಮಿಸ್ಸಿ ಟ್ರೆಸೆಲ್ ಎಂಬವರು ಅಮೆರಿಕದ ಕಡಲತೀರದಲ್ಲಿ ಅಲೆಯುತ್ತಿದ್ದ ವೇಳೆ ಅವರಿಗೆ ದೊಡ್ಡ ಹಲ್ಲಿನ ಆಕೃತಿಯಲ್ಲಿ ವಿಚಿತ್ರ ವಸ್ತುವೊಂದು ಕಣ್ಣಿಗೆ ಬಿದ್ದಿದೆ. ಅದೇನು ಇರಬಹುದು ಎಂದು ಅರ್ಥ ಮಾಡಿಕೊಳ್ಳೋಕೆ ಮಿಸ್ಸಿ ಸುಮಾರು ಸಮಯ ತೆಗೆದುಕೊಂಡಿದ್ದಾರೆ. ಬಳಿಕ ಅದು ಮೆಗಾಲೋಡಾನ್ ಎಂಬ ದೈತ್ಯ ಶಾರ್ಕ್ನ ಹಲ್ಲು ಇದ್ದಿರಬಹುದು ಅಂತಾ ಮಹಿಳೆ ಬಹಳ ಸಂತೋಷದಿಂದ ಹೇಳಿಕೊಂಡಿದ್ದಾರೆ.
ಈ ದೈತ್ಯ ಹಲ್ಲಿನ ಫೋಟೋವನ್ನ ಹಂಟಿಂಗ್ ಐಲ್ಯಾಂಡ್ ಸ್ಟೇಟ್ ಪಾರ್ಕ್ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿಶೇರ್ ಮಾಡಿದೆ. ಇದು ನಿಜವಾಗಲೂ ಮೆಗಾಲೊಡನ್ನ ದಂತವಿರಬಹುದೇ ಅಂತಾ ಅನೇಕರು ಪ್ರಶ್ನೆ ಮಾಡಿದ್ದಾರೆ.
ಮೆಗಾಲೋಡನ್ ದೈತ್ಯ ಶಾರ್ಕ್ಗಳು ಈ ಹಿಂದೆ ಸಮುದ್ರದಲ್ಲಿ ಇತ್ತು ಎನ್ನಲಾಗಿದ್ದು 3.6 ದಶಲಕ್ಷ ವರ್ಷಗಳ ಹಿಂದೆಯೇ ಅಳಿದು ಹೋಗಿದೆ. ಮಿಸ್ಸಿ ಇದನ್ನ ಶಾರ್ಕ್ನ ಹಲ್ಲು ಎಂದು ಹೇಳಿದ್ದು ಈ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ.