ನಾವೆಲ್ಲಾ ಈ ಕೊರೋನಾ ವೈರಸ್‌ಗೇ ತತ್ತರಿಸಿ ಹೋಗುತ್ತಿದ್ದರೆ ಅತ್ತ ಎರಡು ವಿಶ್ವ ಮಹಾಯುದ್ಧಗಳು ಹಾಗೂ ಸ್ಪಾನಿಶ್ ಫ್ಲೂಗಳನ್ನು ಜಯಿಸಿ ಬದುಕಿದ್ದ ದಕ್ಷಿಣ ಆಫ್ರಿಕಾದ 116 ವರ್ಷದ ಹಿರಿಯಜ್ಜ ನಿಧನರಾಗಿದ್ದಾರೆ.
ಮೇ 1904ರಲ್ಲಿ ದಕ್ಷಿಣ ಆಫ್ರಿಕಾದ ಈಸ್ಟರ್ನ್ ಕೇಪ್‌ನಲ್ಲಿ ಜನಿಸಿದ ಫ್ರೆಡ್ಡಿ ಬ್ಲಾಮ್‌ರನ್ನು ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನ್ನಲಾಗುತ್ತಿತ್ತು. ಆದರೆ ಈ ಬಗ್ಗೆ ಗಿನ್ನೆಸ್ ದಾಖಲೆಯಲ್ಲಿ ನಮೂದಿಸಲಾಗಿಲ್ಲ.
1918ರ ಸ್ಪಾನಿಶ್ ಫ್ಲೂನಲ್ಲಿ ತಮ್ಮ ಇಡೀ ಕುಟುಂಬವನ್ನೇ ಕಳೆದುಕೊಂಡ ಬ್ಲೂಮ್, 80ನೇ ವಯಸ್ಸಿನವರೆಗೂ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಬಿಬಿಸಿ ವಾಹಿನಿಗೆ ನೀಡಿದ ಸಂದರ್ಶನವೊಂದಲ್ಲಿ ಮಾತನಾಡಿದ ಬ್ಲೂಮ್, ತಾವೊಬ್ಬ ಧೂಮಪಾನಿಯಾಗಿದ್ದು, ತಮ್ಮ ದೀರ್ಘಾಯುಷ್ಯದ ಹಿಂದೆ ಯಾವ ಗುಟ್ಟೂ ಇಲ್ಲ ಎಂದು ಹೇಳಿಕೊಂಡಿದ್ದರು.
ಜಪಾನಿನ ಜಿರೋಮಾನ್ ಕಿಮುರಾ ಎಂಬ 116 ವರ್ಷದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ಪ್ರಕಾರ ಸದ್ಯದ ಮಟ್ಟಿಗೆ ಭೂಮಿ ಮೇಲೆ ಇರುವ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ತಮ್ಮ 122ನೇ ವಯಸ್ಸಿನಲ್ಲಿ ಮೃತಪಟ್ಟ ಫ್ರಾನ್ಸ್‌ನ ಜೆನ್ನೆ ಲೂಯಿಸ್ ಕಾಲ್ಮೆಂಟ್ ಭೂಮಿ ಮೇಲೆ ಅತ್ಯಂತ ದೀರ್ಘಾವಧಿಗೆ ಬದುಕಿದ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.