ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಲಾದ ಕೊರೊನಾ ಔಷಧಿ ಬಗ್ಗೆ ಇಂದು ಮಾಹಿತಿ ನೀಡಲಾಗುವುದು.
ಮೊದಲ ಹಂತದ ಪ್ರಯೋಗದ ವರದಿ ಇಂದು ಬಿಡುಗಡೆ ಮಾಡಲಾಗುವುದು. ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ವಕ್ತಾರರು ಈ ಕುರಿತು ಮಾಹಿತಿ ನೀಡಲಿದ್ದಾರೆ. ಆಸ್ಟ್ರಾಝೆನೆಕಾ ಫಾರ್ಮಾಸ್ಯುಟಿಕಲ್ಸ್ ಜೊತೆಗೂಡಿ ಔಷದ ಸಿದ್ಧಪಡಿಸಲಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ವತಿಯಿಂದ ಸಿದ್ಧಪಡಿಸಲಾದ ಔಷಧ ಒಂದು ಮತ್ತು ಎರಡನೇ ಹಂತದಲ್ಲಿ ಮಾನವನ ಮೇಲಿನ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿದೆ. ಶೇಕಡ 80 ರಷ್ಟು ಪರಿಣಾಮಕಾರಿಯಾಗಿದೆ. ಈ ಔಷಧ ಕೊರೊನಾ ವಿರುದ್ಧ ಪರಿಣಾಮಕಾರಿಯಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಔಷಧದ 3 ನೇ ಪ್ರಯೋಗ ಯಶಸ್ವಿಯಾದರೆ 200 ಕೋಟಿ ಔಷಧ ಉತ್ಪಾದನೆಯ ಗುರಿ ಹಾಕಿಕೊಳ್ಳಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಔಷಧಕ್ಕೆ AZD 1222 ಎಂದು ಹೆಸರಿಡಲಾಗಿದೆ.
ಬ್ರೆಜಿಲ್ ನಲ್ಲಿ ಆಕ್ಸ್ ಫರ್ಡ್ ವಿವಿಯ ಔಷಧ ಪ್ರಯೋಗ ಯಶಸ್ವಿಯಾಗಿದೆ. ಸದ್ಯ ಪ್ರಾಣಿಗಳ ಮೇಲೆ ಔಷಧ ಪ್ರಯೋಗ ಯಶಸ್ವಿಯಾಗಿದೆ. ಮನುಷ್ಯರ ಮೇಲೆ ಮೂರನೇ ಹಂತದ ಪ್ರಯೋಗ ಮಾತ್ರ ಬಾಕಿ ಉಳಿದಿದೆ. ಮೂರನೆ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧ ಪ್ರಯೋಗಿಸಲಾಗುವುದು.