ಯುನೈಟೆಡ್ ನೇಷನ್ಸ್ ಗೆ ಸೇರಿದ ಕಾರಿನಲ್ಲಿ ಅಧಿಕಾರಿಯೊಬ್ಬ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವಿಡಿಯೋ ವೈರಲ್ ಆಗಿದೆ.
ಯುನೈಟೆಡ್ ನೇಶನ್ಸ್ ಈ ಸಂಬಂಧ ತನಿಖೆಗೆ ಆದೇಶಿಸಿದೆ.
ಇಸ್ರೇಲ್ ನ ಟೆಲ್ ಅವಿವ್ ಪ್ರದೇಶದ ಜನನಿಬಿಡ ರಸ್ತೆಯಲ್ಲಿ ಘಟನೆ ನಡೆದಿದ್ದು, ವಿಡಿಯೋ ಟ್ವಿಟರ್ ನಲ್ಲಿ ಶೇರ್ ಆಗಿದೆ. ಕಾರಿನ ಹಿಂದಿನ ಸೀಟಿನಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದು, ಕೆಂಪು ಉಡುಪು ತೊಟ್ಟ ಮಹಿಳೆ ಆತನ ಮೇಲೆ ಕುಳಿತಿದ್ದಾಳೆ. ಚಾಲಕ ಕಾಣುವುದಿಲ್ಲ. ಆದರೆ, ಇನ್ನೊಬ್ಬ ವ್ಯಕ್ತಿ ಎದುರಿನ ಸೀಟಿನಲ್ಲಿ ಕುಳಿತಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಕಾರು ಯುಎನ್ ಟಿಎಸ್ಒಗೆ ಸೇರಿದೆ. ಈ ವಿಭಾಗದಲ್ಲಿ ಲೈಂಗಿಕ ತಪ್ಪು ನಡುವಳಿಕೆ ವಿರುದ್ಧ ಕಠಿಣ ಕಾನೂನಿದೆ. ಈ ಪರಸ್ಪರ ಒಪ್ಪಂದದ ಲೈಂಗಿಕ ಕ್ರಿಯೆಯಲ್ಲಿ ಮಹಿಳೆಯೊಂದಿಗೆ ಇಬ್ಬರು ಯುವಕರು ಭಾಗಿಯಾಗಿರುವುದು ಖಚಿತವಾಗಿದೆ. ಹಣಕ್ಕಾಗಿ ನಡೆದದ್ದೋ ಇಲ್ಲವೋ ಎಂಬುದು ತನಿಖೆಯ ನಂತರ ತಿಳಿದು ಬರಬೇಕಿದೆ. ಟೆಲ್ ಅವಿವ್ ನ ಹಯರ್ಕಾನ್ ಬೀದಿಯಲ್ಲಿ ಘಟನೆ ನಡೆದಿದೆ. ಈಗಾಗಲೇ ಆಂತರಿಕ ತನಿಖೆ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮ ವಹಿಸಲಾಗುವುದು ಎಂದು ಯುಎನ್ ವಕ್ತಾರ ಸ್ಟೀಪನ್ ಡುಕಾರಿಕ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.