ಲಂಡನ್: ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ಮೊಮ್ಮಗಳು ರಹಸ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಿನ್ಸ್ ಆಂಡ್ರ್ಯೂಸ್ ಮಗಳು ರಾಜಕುಮಾರಿ ಬಿಯಾಟ್ರಿಸ್ ಶುಕ್ರವಾರ ಬಂಕಿಂಗ್ ಹ್ಯಾಮ್ ವಿಂಡ್ಸರ್ ನಲ್ಲಿ ನಡೆದ ಸರಳವಾಗಿ ನಡೆದ ರಹಸ್ಯ ಸಮಾರಂಭದಲ್ಲಿ ಪ್ರಿಯಕರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಎಡೊರ್ಡೊ ಮ್ಯಾಪೆಲ್ಲಿ ಮಾಝೀ ಅವರನ್ನು ಮದುವೆಯಾಗಿದ್ದಾರೆ.
ಬಿಯಾಟ್ರಿಸ್ ಮತ್ತು ಎಡೊರ್ಡೊ ಮ್ಯಾಪೆಲ್ಲಿ ಅವರ ರಹಸ್ಯ ಮದುವೆ ಸಮಾರಂಭದಲ್ಲಿ ರಾಜ ಮನೆತನದ ಹಿರಿಯರು ಸೇರಿ 20 ಗಣ್ಯವ್ಯಕ್ತಿಗಳು ಭಾಗಿಯಾಗಿದ್ದರು. ಮೇ ತಿಂಗಳಿನಲ್ಲಿಯೇ ಲಂಡನ್ ನ ಸೇಂಟ್ ಜೇಮ್ಸ್ ಪ್ಯಾಲೇಸ್ ಚಾಪೆಲ್ ರಾಯಲ್ ನಲ್ಲಿ ಅದ್ದೂರಿ ಮದುವೆ ಮಾಡಲು ದಿನಾಂಕ ನಿಗದಿಯಾಗಿತ್ತು. ಆದರೆ, ಕೊರೋನಾ ಲಾಕ್ ಡೌನ್ ಕಾರಣದಿಂದ ಮದುವೆ ಮುಂದೂಡಲಾಗಿತ್ತು. ಈಗ ರಹಸ್ಯವಾಗಿ ಮದುವೆ ನೆರವೇರಿದೆ ಎನ್ನಲಾಗಿದೆ.