
ಕೊರೋನಾ ವೈರಸ್ ಅಂತೆಲ್ಲಾ ಏನೂ ಇಲ್ಲ ಎಂದುಕೊಂಡಿದ್ದ ಉಕ್ರೇನ್ ನ33 ವರ್ಷದ ಫಿಟ್ನೆಸ್ ಫ್ರೀಕ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡಿಮಿಟ್ರಿ ಸ್ಟಝಕ್ ಇದೇ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಸೋಂಕಿನ ಕಾರಣದಿಂದ ಸಂಭವಿಸಿದ ಹೃದಯ ಸಂಬಂಧಿ ಸಮಸ್ಯೆಯಿಂದ ಡಿಮಿಟ್ರಿ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಸೋಫಿಯಾ ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ನಲ್ಲಿ ಹಾಕಿಕೊಂಡಿದ್ದಾರೆ.
ಅನಾರೋಗ್ಯದ ಸಮಸ್ಯೆಯಿಂದ ಅರೆ ಪ್ರಜ್ಞಾವಸ್ಥೆ ತಲುಪಿದ ಡಿಮಿಟ್ರಿರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿಸಬೇಕಾಗಿ ಬಂದಿತ್ತು ಎಂದು ಸೋಫಿಯಾ ತಿಳಿಸಿದ್ದಾರೆ.
ಇತ್ತೀಚೆಗೆ ಟರ್ಕಿಗೆ ತೆರಳಿದ್ದ ಡಿಮಿಟ್ರಿ, ಅಲ್ಲಿ ಕೊರೋನಾ ವೈರಸ್ ಸೋಂಕಿಗೆ ಬಾಧಿತರಾಗಿದ್ದರು ಎಂದು ತಿಳಿದುಬಂದಿದೆ.
https://www.instagram.com/p/CGVXb6mHmEZ/?utm_source=ig_web_copy_link