alex Certify ಬರ್ಗರ್‌ ತಿನ್ನಲು 160 ಕಿಮೀ ಪಯಣಿಸಿ 200 ಪೌಂಡ್‌ ದಂಡ ತೆತ್ತ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರ್ಗರ್‌ ತಿನ್ನಲು 160 ಕಿಮೀ ಪಯಣಿಸಿ 200 ಪೌಂಡ್‌ ದಂಡ ತೆತ್ತ ಮಹಿಳೆ

UK Woman Fined £200 for Travelling 160 Km to Get a Burger During Covid-19 Lockdown

ಮ್ಯಾಕ್‌ಡೊನಾಲ್ಡ್‌ ಬರ್ಗರ್‌‌ ತಿನ್ನಬೇಕು ಎಂಬ ಬಯಕೆಗೆ ಬಿದ್ದ ಬ್ರಿಟನ್‌ ಮಹಿಳೆಯೊಬ್ಬರು ತಮ್ಮ ಮೆಚ್ಚಿನ ಖಾದ್ಯವನ್ನು ಸವಿಯಲು ಲಾಕ್‌ಡೌನ್‌ ಉಲ್ಲಂಘನೆ ಮಾಡಿ 160 ಕಿಮೀ ಪ್ರಯಾಣ ಮಾಡಿದ ಕಾರಣಕ್ಕೆ 200 ಪೌಂಡ್‌ ದಂಡ ಪಾವತಿ ಮಾಡಿದ್ದಾರೆ.

ಬರೀ ಬರ್ಗರ್‌ ತಿನ್ನೋದಕ್ಕೆ ಇಲ್ಲಿನ ಲಿಂಕನ್‌ಶೈರ್‌‌ನಿಂದ ಸ್ಕಾರ್‌ಬರೋವರೆಗೂ ಮೂರು ಕೌಂಟಿಗಳನ್ನು ಹಾದು ಹೋಗುವ ಅಗತ್ಯವೇನೂ ಇರಲಿಲ್ಲ ಎಂದಿರುವ ನಾರ್ಥ್‌ ಯಾರ್ಕ್‌ಶೈರ್‌ ಪೊಲೀಸರು, ದ್ವಿಚಕ್ರ ವಾಹನದಲ್ಲಿ ತನ್ನ ಸಹೋದರಿಯೊಂದಿಗೆ ರೆಸ್ಟೋರೆಂಟ್‌ಗೆ ಹೋಗಿದ್ದ ಈ ಮಹಿಳೆಗೆ ದಂಡ ವಿಧಿಸಿದ್ದಾರೆ.

ಕೊರೋನಾ ವೈರಸ್‌ನ ಹೊಸ ಅವತರಣಿಕೆ ಕಾಣಿಸಿಕೊಂಡ ಬಳಿಕ ಬ್ರಿಟನ್‌ ಭಾರೀ ಗೊಂದಲಮಯವಾಗಿದ್ದು, ಮತ್ತೊಂದು ಲಾಕ್‌ಡೌನ್‌ನಲ್ಲಿದೆ. ಕೋವಿಡ್-19ನ ಈ ಹೊಸ ಎಳೆಯು ಹಿಂದಿನ ವರ್ಶನ್‌ಗಿಂತ ಅಪಾಯಕಾರಿ ಎನ್ನಲಾಗಿದೆ.

ಇದೇ ವೇಳೆ ಲಿಂಕನ್‌ಶೈರ್‌ನ ಮತ್ತೊಬ್ಬ ವ್ಯಕ್ತಿಯ ಲಾಕ್‌ಡೌನ್ ಅವಧಿಯಲ್ಲೂ ಸಹ ಫುಟ್ಬಾಲ್ ಮೈದಾನಗಳಿಗೆ ಭೇಟಿ ನೀಡುತ್ತಿದ್ದ ಕಾರಣ ಆತನಿಗೆ 70 ಪೌಂಡ್ ದಂಡ ವಿಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...