ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ನಿರಂತರವಾಗಿ ಹೆಚ್ಚಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ನಡೆಯುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ನಡೆದಿದೆ. ಆದ್ರೆ ಲಸಿಕೆ ನಂತ್ರವೂ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ. ವಿಶ್ವದ ಎಲ್ಲ ಜನರಿಗೂ ಲಸಿಕೆ ಸಿಕ್ಕರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರಕ್ಕೆ ಸದ್ಯ ಮುಕ್ತಿ ಸಿಗುವುದಿಲ್ಲ.
ಇನ್ನು ಅನೇಕ ವರ್ಷಗಳ ಕಾಲ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಅನಿವಾರ್ಯವಾಗಲಿದೆ ಎಂದು ಇಂಗ್ಲೆಂಡ್ ನ ಸಾರ್ವಜನಿಕ ಆರೋಗ್ಯ ಇಲಾಖೆ ರೋಗನಿರೋಧಕ ತಜ್ಞ ಡಾ ರಾಮ್ಸೆ ಹೇಳಿದ್ದಾರೆ. ವಿಶ್ವದ ಜನರಿಗೆ ಮಾಸ್ಕ್ ಸೇರಿದಂತೆ ಕೆಲ ನಿರ್ಬಂಧಗಳು ರೂಢಿಯಾಗಿವೆ. ಅವರು ಅದ್ರ ಮಧ್ಯೆ ಜೀವನ ಸಾಗಿಸಬಲ್ಲವರಾಗಿದ್ದಾರೆ. ಈ ನಿರ್ಬಂಧಗಳ ಮಧ್ಯೆಯೇ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಯಾವುದೇ ನಿರ್ಬಂಧ ತೆಗೆದು ಹಾಕುವ ಮೊದಲು ಸರ್ಕಾರ ಎಚ್ಚರವಹಿಸಬೇಕೆಂದು ಅವರು ಹೇಳಿದ್ದಾರೆ.
ಹೆಚ್ಚು ಜನ ಸೇರುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಎಚ್ಚರಿಕೆ ಅವಶ್ಯಕವಿದೆ. ಎಲ್ಲ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಡಾ. ರಾಮ್ಸೆ ಹೇಳಿದ್ದಾರೆ.