Black Lives Matter ಪ್ರತಿಭಟನೆಗಳ ಹಿನ್ನೆಲೆಯಲ್ಲೇ, ಕೃಷ್ಣ ವರ್ಣೀಯ ಜೋಡಿಯೊಂದಕ್ಕೆ ಕಿರುಕುಳ ಕೊಟ್ಟ ತನ್ನ ಸಿಬ್ಬಂದಿ ವರ್ಗದ ಪರವಾಗಿ ಬ್ರಿಟನ್‌ನ ಸಫ್ಫೋಕ್ ಪೊಲೀಸರು ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮೋಟಾರ್ ವಾಹನದಲ್ಲಿ ಚಲಿಸುತ್ತಿದ್ದ ಜೋಡಿಗೆ ಅಡ್ಡಗಟ್ಟಿ ಅವರ ಗುರುತಿನ ವಿವರಗಳನ್ನು ಕೇಳುವ ವೇಳೆ ದಂಪತಿಯನ್ನು ಕ್ರಿಮಿನಲ್ ಗಳಂತೆ ನಡೆಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಲ್ಲಿನ ಪೊಲೀಸ್ ಇಲಾಖೆಗೆ ಇರುಸು ಮುರುಸು ಉಂಟಾಗಿದೆ.
ಬ್ರಿಟನ್‌ನಲ್ಲೂ ಸಹ ವರ್ಣಬೇಧದ ವಿರುದ್ಧದ ಪ್ರತಿಭಟನೆ ಜೋರಾಗಿದ್ದು, ಕಳೆದ ವಾರವಷ್ಟೇ ಇಂಗ್ಲೆಂಡ್ ದಕ್ಷಿಣದಲ್ಲಿರುವ ಊರೊಂದರಲ್ಲಿ ಈ ಹಿಂದೆ ಗುಲಾಮಗಿರಿಯ ಮಾರುಕಟ್ಟೆ ನಡೆಸುತ್ತಿದ್ದ ವ್ಯಾಪಾರಿ ಎಡ್ವರ್ಡ್ ಕಾಲ್ಸ್‌ಟನ್ ಪ್ರತಿಮೆಯನ್ನು ಕೆಳಗುರುಳಿಸಿಲಾಗಿದೆ.
https://twitter.com/UncleKingso/status/1271442374993088518?ref_src=twsrc%5Etfw%7Ctwcamp%5Etweetembed%7Ctwterm%5E1271442374993088518&ref_url=https%3A%2F%2Fwww.news18.com%2Fnews%2Fbuzz%2Fuk-police-apologise-after-backlash-over-video-of-cops-stopping-black-couple-for-driving-on-road-2666909.html