ಕೊರೊನಾ ವೈರಸ್ ಹೆಚ್ಚಳ ಹಿನ್ನೆಲೆ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಮುಂದಿನ ವಾರ ಕೈಗೊಳ್ಳಬೇಕಿದ್ದ ಭಾರತ ಪ್ರವಾಸವನ್ನ ರದ್ದು ಮಾಡಿದ್ದಾರೆ. ಈ ಬಗ್ಗೆ ಬ್ರಿಟನ್ ಪ್ರಧಾನಿ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಪ್ರಸ್ತುತ ಕೊರೊನಾ ವೈರಸ್ನ್ನು ಗಮನದಲ್ಲಿ ಇಟ್ಟುಕೊಂಡು, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಮುಂದಿನ ವಾರದ ಭಾರತ ಪ್ರವಾಸವನ್ನ ಕೈಗೊಳ್ಳುತ್ತಿಲ್ಲ. ಭಾರತ ಹಾಗೂ ಬ್ರಿಟನ್ ಮುಂದಿನ ದಿನಗಳಲ್ಲಿ ಸಭೆಯನ್ನ ನಡೆಸಿ ಉಭಯ ದೇಶದ ಸಂಬಂಧವನ್ನ ಸರಿಮಾಡಿಕೊಳ್ಳಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಏಪ್ರಿಲ್ 26ರಂದು ಬೋರಿಸ್ ಜಾನ್ಸನ್ರ ಭಾರತ ಪ್ರವಾಸ ನಿಗದಿಯಾಗಿತ್ತು. ಮುಂಬೈ ಹಾಗೂ ಪುಣೆಗೆ ಬ್ರಿಟನ್ ಪ್ರಧಾನಿ ಭೇಟಿಯಾಗಬೇಕಿತ್ತು. ಆದರೆ ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಪ್ರವಾಸವನ್ನ ಬ್ರಿಟನ್ ಪ್ರಧಾನಿ ಕೈಬಿಟ್ಟಿದ್ದಾರೆ.
ಜೂನ್ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಪ್ರಧಾನಿ ಭಾರತಕ್ಕೆ ಆಹ್ವಾನ ನೀಡಿದ್ದಾರೆ.