alex Certify ಕಾರಿನಲ್ಲಿ ಹೂಸು ಬಿಟ್ಟವನೀಗ ಜೈಲು ಪಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿ ಹೂಸು ಬಿಟ್ಟವನೀಗ ಜೈಲು ಪಾಲು…!

UK Man Sentenced to Prison after Farting in Uber that Led to Assault Charges

ಕಾರಿನಲ್ಲಿ ಹೂಸು ಬಿಟ್ಟ ಎಂಬ ಕಾರಣಕ್ಕೆ 35 ವರ್ಷದ ವ್ಯಕ್ತಿಯೊಬ್ಬರನ್ನು ಜೈಲಿಗೆ ಹಾಕುವವರೆಗೂ ಮುಂದುವರೆದ ಪ್ರಸಂಗವೊಂದು ಬ್ರಿಟನ್‌ನಲ್ಲಿ ಘಟಿಸಿದೆ.

ಈ ಘಟನೆ ಕಳೆದ ವರ್ಷ ನಡೆದಿದ್ದು, ಊಬರ್‌ ಟ್ಯಾಕ್ಸಿ ಚಾಲಕ ಅಲೆಕ್ಸಂಡರ್‌ ಬಾಂಕೆವ್‌ ತಮ್ಮ ಗಿರಾಕಿ ಜೇಮ್ಸ್‌ ಮಾಲ್ಲೆಟ್‌ರನ್ನು ದಕ್ಷಿಣ ಗ್ಲೌಸೆಸ್ಟರ್‌ಶೈರ್‌ನಲ್ಲಿರುವ ನೈಟ್‌ ಕ್ಲಬ್‌ ಒಂದಕ್ಕೆ ಕರೆದೊಯ್ಯುವವರಿದ್ದರು. ಮೊದಲೇ ದಿನಪೂರ್ತಿ ತಲೆಕೆಟ್ಟ ಗ್ರಾಹಕರೊಂದಿಗೆ ಸಂಭಾಳಿಸಿ ರೋಸಿ ಹೋಗಿದ್ದ ಬಾಂಕೆವ್‌ಗೆ ಮಾಲ್ಲೆಟ್‌ ಕೊಟ್ಟ ಈ ವಿಚಿತ್ರ ಟಾರ್ಚರ್‌ನಿಂದ ಸಿಟ್ಟು ನೆತ್ತಿಗೇರಿದೆ.

ತನ್ನ ಟ್ಯಾಕ್ಸಿಯಿಂದ ಮೊದಲು ಕೆಳಗಿಳಿಯುವಂತೆ ಗಿರಾಕಿ ಮಾಲ್ಲೆಟ್‌ಗೆ ತಾಕೀತು ಮಾಡಿದ್ದಾರೆ ಬಾಂಕೆವ್‌. ಈ ಮಾತನ್ನು ಕೇಳಿದ ಗ್ರಾಹಕ ಚಾಲಕನಿಗೆ ಪಂಚ್‌ ಕೊಟ್ಟಿದ್ದಾನೆ. ಕೂಡಲೇ ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಘಟನೆಯ ವಿಚಾರಣೆ ಬಳಿಕ ಮಾಲ್ಲೆಟ್‌ಗೆ ಆರು ತಿಂಗಳು ಜೈಲು ಹಾಗೂ $650ಗಳ ದಂಡ ವಿಧಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...