ಕ್ರಿಸ್ಮಸ್ ಹಬ್ಬಕ್ಕೆ ವಿವಿಧ ದೇಶದಲ್ಲಿ ತರಹೇವಾರಿ ರೀತಿಯಲ್ಲಿ ತಯಾರಿ ನಡೆಯುತ್ತಿದೆ ಇವೆಲ್ಲದರ ಮಂದ್ಯೆ ಬ್ರಿಟನ್ನ 52 ವರ್ಷದ ಸೈಕ್ಲಿಸ್ಟ್ ಬರೋಬ್ಬರಿ 79 ಮೈಲಿ ದೂರ ಸೈಕಲ್ನಲ್ಲಿ ಮೇರಿ ಕ್ರಿಸ್ಮಸ್ ಎಂಬ ಹೆಸರಿನ ಆಕೃತಿ ಬರುವಂತೆ ಸಂಚರಿಸಿದ್ದಾರೆ.
ಪೆಡ್ಲಿಂಗ್ ಪಿಕಾಸೋ ಎಂಬ ಹೆಸರಿನ ಪೋರ್ಟ್ ಪೋಲಿಯೋ ಹೊಂದಿರುವ ಸೈಕ್ಲಿಸ್ಟ್ ಮ್ಯಾಪ್ ಮೂಲಕ ಕ್ರಿಸ್ಮಸ್ ಶುಭಾಶಯ ಕೋರುವ ಸಲುವಾಗಿ ಬರೋಬ್ಬರಿ 9 ಗಂಟೆಗಳ ಕಾಲ ಸವಾರಿ ಮಾಡಿದ್ದಾರೆ.
ಅಂದ ಹಾಗೆ ಇವರ ಹೆಸರು ಆಂಥೋನಿ ಹೋಯ್ಟೆ ಆಗಿದ್ದು ತನ್ನ ಸೈಕ್ಲಿಂಗ್ ಮಾರ್ಗದ ಮೂಲಕವೇ ಈ ಆಕೃತಿ ರಚಿಸಿದ್ದಾರೆ ಅಂತಾ ಮೆಟ್ರೋ ವರದಿ ಮಾಡಿದೆ.
ಆಂಥೋನಿ ಉತ್ತರ ಲಂಡನ್ನ ಇಸ್ಲಿಂಗ್ಟಿನ್ನಲ್ಲಿ ಸೈಕ್ಲಿಂಗ್ ಆರಂಭಿಸಿದರು. ಬಳಿಕ ಪೂರ್ವದ ಕ್ಯಾಮ್ಡೆನ್ ಹಾಗೂ ಹ್ಯಾಂಪ್ಸ್ಟರ್ ಮೂಲಕ ಪ್ರಯಾಣಿಸಿದರು. ಕ್ಲರ್ಕೆನ್‌ವೆಲ್, ಹಾಕ್ಸ್ಟನ್ ಮತ್ತು ಬೆಥ್ನಾಲ್ ಗ್ರೀನ್‌ನಂತಹ ಪ್ರದೇಶಗಳ ಮೂಲಕ ಅವರು ಆಗ್ನೇಯಕ್ಕೆ ಮರಳಿದರು. ಅದರ ನಂತರ, ಅವರು ಪಶ್ಚಿಮಕ್ಕೆ ಹೋಗಿ ಮತ್ತೊಮ್ಮೆ ಇಸ್ಲಿಂಗ್ಟನ್‌ಗೆ ಮರಳಿದರು.